ಭೋಪಾಲ್ : ಉತ್ತರ ಪ್ರದೇಶದ ಬಳಿಕ ಇದೀಗ ಬಿಜೆಪಿ ಆಡಳಿತರ ಮಧ್ಯಪ್ರದೇಶದಲ್ಲೂ ದಲಿತರ ಮೇಲೆ ಸರಣಿ ಅಪರಾಧಿಕ ಕೃತ್ಯಗಳು ವರದಿಯಾಗುತ್ತಿವೆ. ಮಧ್ಯಪ್ರದೇಶದ ಗುನಾ ಎಂಬಲ್ಲಿ, 50ರ ಹರೆಯದ ದಲಿತ ವ್ಯಕ್ತಿಯೊಬ್ಬರು ಬೆಂಕಿಪೊಟ್ಟಣ ನೀಡಲಿಲ್ಲ ಎಂದು ಜಾತಿ ಭಯೋತ್ಪಾದಕರಿಬ್ಬರು ಥಳಿಸಿ ಹತ್ಯೆ ಮಾಡಿದ ಘಟನೆ ನಡೆದಿದೆ.
ದಲಿತ ವ್ಯಕ್ತಿ ಲಾಲ್ ಜೀ ರಾಮ್ ಆಹಿರ್ವಾರ್ ಹೊಲವೊಂದರ ಬಳಿ ಕುಳಿತುಕೊಂಡು ವಿರಮಿಸುತ್ತಿದ್ದರು. ಆಗ ಆರೋಪಿಗಳಾದ ಯಶ್ ಯಾದವ್ ಮತ್ತು ಅಂಕೇಶ್ ಯಾದವ್ ಎಂಬವರು ಅಲ್ಲಿ ಬಂದು, ಸಿಗರೇಟ್ ಸೇದಲು ಬೆಂಕಿ ಪೆಟ್ಟಿಗೆ ನೀಡುವಂತೆ ಕೇಳಿದ್ದಾರೆ. ಆಹಿರ್ವಾರ್ ಬೆಂಕಿಪೆಟ್ಟಿಗೆ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ವಾಗ್ವಾದ ನಡೆದು, ಆಕ್ರೋಶಿತ ಆರೋಪಿಗಳು ಆಹಿರ್ವಾರ್ ಮೇಲೆ ಕೋಲುಗಳಿಂದ ಹೊಡೆದು ಸಾಯಿಸಿದ್ದಾರೆ.
ಆರೋಪಿಗಳನ್ನು ಬಂಧಿಸಲಾಗಿದೆ. ಗ್ರಾಮದಲ್ಲಿ ಮುನ್ನೆಚ್ಚರಿಗೆ ಸಲುವಾಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.