ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ. 77.56 ಮತದಾನವಾಗಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇ.83 ಮತದಾನವಾಗಿದೆ. ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ ಶೇ.81.30, ಮೂಡುಬಿದಿರೆ- ಶೇ.76.51, ಮಂಗಳೂರು ಉತ್ತರ- ಶೇ.73.78, ಮಂಗಳೂರು ದಕ್ಷಿಣ- ಶೇ.67.17, ಮಂಗಳೂರು- ಶೇ.78.36 ಮತದಾನ ಆಗಿದೆ. ಬಂಟ್ವಾಳ ಕ್ಷೇತ್ರದಲ್ಲಿ ಶೇ.81.28, ಪುತ್ತೂರು ಕ್ಷೇತ್ರದಲ್ಲಿ ಶೇ.81.10 ಮತದಾನ ಆಗಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.