ಮಂಗಳೂರು: ರಮಝಾನ್ ಆರಂಭ ದಿನದಂದು ಉಪವಾಸ ವೃತ ಮುಗಿಸಿ ರಾತ್ರಿಯೇ ದ.ಕ. ಜಿಲ್ಲೆಯಾದ್ಯಂತ ಎಸ್ಡಿಪಿಐ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಸೇರಿ CAA ಜಾರಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಸರಕಾರ ಕೂಡಲೇ ಈ ಕಾನೂನನ್ನು ವಾಪಸು ಪಡೆಯಬೇಕು ಮತ್ತು 90% ಶೇಕಡಾ ಮುಸ್ಲಿಮರು ಮತ ನೀಡಿ ರಚನೆಯಾದ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರ ಈ ರಾಜ್ಯದಲ್ಲಿ ಈ ಕಾಯ್ದೆಯನ್ನು ತಿರಸ್ಕರಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಕ್ಷದ ಗ್ರಾಮ, ವಾರ್ಡ್, ಬ್ಲಾಕ್ ಮಟ್ಟದಲ್ಲಿ ವಿವಿಧ ರೀತಿಯಲ್ಲಿ ಪ್ರತಿಭಟನೆಗಳು ನಡೆಸಲಾಗಿದೆ.