ಚೆನ್ನೈ : ನಿವಾರ್ ಚಂಡಮಾರುತ ತಮಿಳುನಾಡು, ಪಾಂಡಿಚೇರಿ ಮತ್ತು ಆಂಧ್ರ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ಥಗೊಳಿಸಿ, ಸಾಕಷ್ಟು ಆಸ್ತಿಪಾಸ್ತಿ ನಷ್ಟವುಂಟು ಮಾಡಿದೆ. ಚಂಡಮಾರುತ ಸಂಬಂಧಿ ದುರಂತದಲ್ಲಿ ಮೂವರು ಸಾವಿಗೀಡಾಗಿದ್ದು, ಸಾವಿರಾರು ಮರಗಳು ಧರೆಗುರುಳಿವೆ.
ತಮಿಳುನಾಡಿನಲ್ಲಿ ಮತ್ತೊಂದು ಸುತ್ತಿನ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತ ಕಂಡುಬಂದಿದ್ದು, ನ.29ರ ನಂತರ ಮತ್ತೊಂದು ಸುತ್ತಿನ ಮಳೆಯಾಗುವ ನಿರೀಕ್ಷೆಯಿದೆ.
ಸಾವಿರಕ್ಕೂ ಹೆಚ್ಚು ಮರಗಳು ಬುಡಮೇಲಾಗಿವೆ. ವಿದ್ಯುತ್ ಕಂಬಗಳೂ ತುಂಡಾಗಿ ಬಿದ್ದಿವೆ. ಹೀಗಾಗಿ ಹಲವೆಡೆ ವಿದ್ಯುತ್ ವ್ಯತ್ಯಯವಾಗಿದೆ. ತಮಿಳುನಾಡಿನಲ್ಲಿ ಸರಕಾರ ಸಿದ್ಧಪಡಿಸಿದ 3,085 ಪರಿಹಾರ ಶಿಬಿರಗಳಲ್ಲಿ 2,27,317 ಮಂದಿಯನ್ನು ವರ್ಗಾಯಿಸಲಾಗಿದೆ. ಸರಕಾರ 13 ಲಕ್ಷ ನಿರಾಶ್ರಿತರಿಗೆ ಆಶ್ರಯ ನೀಡಬಹುದಾದ 4,233 ಪರಿಹಾರ ಶಿಬಿರಗಳನ್ನು ಸಿದ್ಧಪಡಿಸಿದೆ.