Home ಟಾಪ್ ಸುದ್ದಿಗಳು ದುಬೈನಿಂದ ಬೆಂಗಳೂರಿಗೆ ಬಂದವನ ಬ್ಯಾಗ್’ನಲ್ಲಿತ್ತು 40 ಐಪೋನ್, 5 ವಾಚ್: ವಶಕ್ಕೆ ಪಡೆದ ಕಸ್ಟಮ್ಸ್

ದುಬೈನಿಂದ ಬೆಂಗಳೂರಿಗೆ ಬಂದವನ ಬ್ಯಾಗ್’ನಲ್ಲಿತ್ತು 40 ಐಪೋನ್, 5 ವಾಚ್: ವಶಕ್ಕೆ ಪಡೆದ ಕಸ್ಟಮ್ಸ್

ಬೆಂಗಳೂರು: ದುಬೈಯಿಂದ ಬೆಂಗಳೂರಿಗೆ ಬಂದ ವ್ಯಕ್ತಿಯೊಬ್ಬರ ಬ್ಯಾಗ್ ನಲ್ಲಿ ಬರೋಬ್ಬರಿ 40 ಐಫೋನ್ ಹಾಗೂ 5 ಆ್ಯಪಲ್ ವಾಚ್ ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


ದುಬೈಯಿಂದ ಬಂದ ಪ್ರಯಾಣಿಕ ಕ್ಯಾಬಿನ್ ಬ್ಯಾಗ್ನಲ್ಲಿ ಐಫೋನ್ ಮತ್ತು ಆ್ಯಪಲ್ ವಾಚ್ ಗಳನ್ನು ಅಡಗಿಟ್ಟಿಸಿಕೊಂಡು ಬಂದಿದ್ದರು. ಅಕ್ರಮವಾಗಿ ದುಬೈನಿಂದ ಐಪೋನ್ ಗಳನ್ನ ತಂದು ಇಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ್ದರೆಂದು ಆರೋಪಿಸಲಾಗಿದೆ. ಸದ್ಯ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿವೆ.

Join Whatsapp
Exit mobile version