ನವದೆಹಲಿ: ಪೊಲೀಸ್ ಠಾಣೆಯಲ್ಲಿನ ಹಿಂಸಾಚಾರದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಮಧ್ಯೆ ಉತ್ತರ ಪ್ರದೇಶದಲ್ಲಿ ಅಲ್ತಾಫ್ ಎಂಬ ಯುವಕನ ಕಸ್ಟಡಿ ಸಾವಿನ ಕುರಿತು ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ.
ಅಲ್ತಾಫ್ ಎಂಬಾತನನ್ನು ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಠಾಣೆಗೆ ಕರೆಯಿಸಿದ್ದು, ನಂತರದ ಬೆಳವಣಿಗೆಯೊಂದರಲ್ಲಿ ವಾಶ್ ರೂಂ ನಲ್ಲಿ ಸಣ್ಣ ನೀರಿನ ನಲ್ಲಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಅಲ್ತಾಫ್ ನ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ ಕುಟುಂಬ, ಇದು ಪೊಲೀಸರು ನಡೆಸಿದ ವ್ಯವಸ್ಥಿತ ಕೊಲೆಯೆಂದು ಆರೋಪಿಸಿತ್ತು. ಮಾತ್ರವಲ್ಲ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಸರ್ಕಾರವನ್ನು ಒತ್ತಾಯಿಸಿತ್ತು.
ಈ ಮಧ್ಯೆ ದೇಶದೆಲ್ಲೆಡೆ ನಿರಂತರ ಪೊಲೀಸ್ ಹಿಂಸಾಚಾರ ವೃದ್ಧಿಸುತ್ತಿದ್ದು, ಈ ಎಲ್ಲಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಮ್ ಕೋರ್ಟ್, ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಅಳವಡಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡುವ ಕುರಿತು ಸಾರ್ವಜನಿಕರು ಒತ್ತಾಯಿಸಿದ್ದಾರೆ.