ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹುಟ್ಟು ಹಬ್ಬದ ಹಿನ್ನೆಲೆ ಶುಭಾಶಯ ಕೋರಿ ವಿಧಾನಸೌಧದ ಮುಂಭಾಗ ಫ್ಲೆಕ್ಸ್ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ
ಜಿ.ಕಿಶನ್ ಗೌಡ ಹಾಗೂ ಎಲ್.ನರೇಂದ್ರ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹೈಕೋರ್ಟ್ ಆದೇಶ ಹಾಗೂ ರಾಜ್ಯ ಸರಕಾರದ ನಿಯಮಗಳನ್ನು ಉಲ್ಲಂಘನೆ ಆಗಿರುವುದಾಗಿ ಗೀತಾ ಮಿಶ್ರಾ ಎಂಬುವರು ದೂರು ನೀಡಿ ಮೊಕದ್ದಮೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರಿಗೂ ನೋಟಿಸ್ ನೀಡಿ, ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತೆ ಬಿಂದು ಗೌಡ ಎಂಬುವವರು ಜು. 18 ರಂದು ಸಿಟಿ ರವಿ ಅವರ ಅಭಿಮಾನಿಗಳು ಜನ್ಮದಿನಕ್ಕೆ ಶುಭಕೋರಿ ಹಾಕಿದ್ದ ಬ್ಯಾನರನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಅನಧಿಕೃತವಾಗಿ ಬ್ಯಾನರ್ ಅಳವಡಿಕೆಗೆ ಮಾಡಿದ್ದಾರೆ. ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದ್ದರೂ ನ್ಯಾಯಾದೇಗುಲದ ಮುಂಭಾಗದಲ್ಲೇ ಫ್ಲೆಕ್ಸ್ ಹಾಕಲಾಗಿದೆ ಎಂದು ಬಿಂದು ಗೌಡ ಆಕ್ರೋಶ ವ್ಯಕ್ತಪಡಿಸಿದ್ದರು.