“ನಾಳೆ, ನಾಡಿದ್ದು ಏನಾಗುತ್ತೋ ಗೊತ್ತಿಲ್ಲ.. ಸದ್ಯಕ್ಕೆ ಯಡಿಯೂರಪ್ಪನವರೇ ಸಿಎಂ”: ಅಡ್ಡ ಗೋಡೆ ದೀಪವಿಟ್ಟ ಸಿಟಿ ರವಿ ಹೇಳಿಕೆ!

Prasthutha|

ಮೈಸೂರು: “ಸದ್ಯಕ್ಕೆ ಬಿಎಸ್ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರುತ್ತಾರೆ. ನಾಳೆ, ನಾಡಿದ್ದು ಏನಾಗುತ್ತೋ ಅದರ ಬಗ್ಗೆ ನನಗೆ ಗೊತ್ತಿಲ್ಲ..” ಹೀಗಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ. ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬರುತ್ತಲೇ ಸಿಟಿ ರವಿ ಅವರ ಈ ಹೇಳಿಕೆ ಭಾರೀ ಸುದ್ದಿಗೆ ಗ್ರಾಸವಾಗಿದೆ.  

- Advertisement -

ಮೈಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ವರ್ತಮಾನದ ಬಗ್ಗೆ ಮಾತ್ರ ಮಾತಾಡಬಲ್ಲೆ. ಭವಿಷ್ಯದ ಬಗ್ಗೆ ಮಾತಾಡಲಾರೆ, ಯಡಿಯೂರಪ್ಪನವರು ಬಿಜೆಪಿಯ ಸರ್ವಾನುಮತದ ಆಯ್ಕೆಯಾಗಿದ್ದಾರೆ..” ಅನ್ನೋ ಮೂಲಕ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಸಿಟಿ ರವಿ ಹೇಳಿಕೆಯನ್ನ ನೀಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರ ಈ ಹೇಳಿಕೆ ಸಹಜವಾಗಿಯೇ ನಾಯಕತ್ವ ಬದಲಾವಣೆ ಆಗುವ ಸಾಧ್ಯತೆ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಅಲ್ಲದೇ, ಬಿಎಸ್ ಯಡಿಯೂರಪ್ಪನವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಂತೋಷ್ ಬಣ ಹೆಚ್ಚು ಕಾತುರವಾದಂತೆ ಸಿಟಿ ರವಿ ಹೇಳಿಕೆ ಬಿಂಬಿಸುತ್ತಿದೆ.

ಕಳೆದ ನಾಲ್ಕು ದಿನಗಳ ಹಿಂದಷ್ಟೇ ಸಿಟಿ ರವಿ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಿಕ್ಕಮಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಒಂದು ಗಂಟೆ ಕಾಲ ಚರ್ಚಿಸಿದ್ದರು. ಅಲ್ಲದೇ, ಕೋವಿಡ್ 2ನೆ ಅಲೆ ನಿಭಾಯಿಸುವಲ್ಲಿ ರಾಜ್ಯ ಸರಕಾರ ತೋರಿದ ವೈಫಲ್ಯವನ್ನ ಬಹಿರಂಗವಾಗಿ ಸಿಟಿ ರವಿ ಟೀಕಿಸಿದ್ದು ಸುದ್ದಿಯಾಗಿತ್ತು.

Join Whatsapp