Home ಟಾಪ್ ಸುದ್ದಿಗಳು ತಾಯಿಯನ್ನು ಮರಕ್ಕೆ ಕಟ್ಟಿ ಜೀವಂತ ಸುಟ್ಟು ಹಾಕಿದ ಕ್ರೂರ ಮಕ್ಕಳು..!

ತಾಯಿಯನ್ನು ಮರಕ್ಕೆ ಕಟ್ಟಿ ಜೀವಂತ ಸುಟ್ಟು ಹಾಕಿದ ಕ್ರೂರ ಮಕ್ಕಳು..!

ತ್ರಿಪುರಾ: ಸಂಬಂಧಗಳ ಬೆಲೆ ಅರಿಯದ ಮಕ್ಕಳು ತಾಯಿಯನ್ನು ಮರಕ್ಕೆ ಕಟ್ಟಿಹಾಕಿ ಸಜೀವವಾಗಿ ದಹಿಸಿರುವ ಘಟನೆ ಪಶ್ಚಿಮ ತ್ರಿಪುರಾದಲ್ಲಿ ನಡೆದಿದೆ.

62 ವರ್ಷದ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಇಬ್ಬರು ಪುತ್ರರು ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪುತ್ರರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದು, ಕೌಟುಂಬಿಕ ಕಲಹವೇ ಭೀಕರ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಚಂಪಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖಮರ್ಬರಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಮಹಿಳೆ ಸುಮಾರು ಒಂದೂವರೆ ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡ ನಂತರ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಆಕೆಯ ಇನ್ನೊಬ್ಬ ಮಗ ಅಗರ್ತಲಾದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.

Join Whatsapp
Exit mobile version