Home ಟಾಪ್ ಸುದ್ದಿಗಳು ಸಬ್ ಇನ್ಸ್‌ಪೆಕ್ಟರ್ ನನ್ನೇ ಹತ್ಯೆಗೈದ CRPF ಹೆಡ್‌ ಕಾನ್‌ಸ್ಟೆಬಲ್!

ಸಬ್ ಇನ್ಸ್‌ಪೆಕ್ಟರ್ ನನ್ನೇ ಹತ್ಯೆಗೈದ CRPF ಹೆಡ್‌ ಕಾನ್‌ಸ್ಟೆಬಲ್!

ಹೈದರಾಬಾದ್: ಸಬ್ ಇನ್ಸ್‌ಪೆಕ್ಟರ್ ನನ್ನೇ CRPF ಹೆಡ್ ಕಾನ್‌ಸ್ಟೆಬಲ್ ಹತ್ಯೆಗೈದ ಘಟನೆ ತೆಲಂಗಾಣದ ಮುಲಗು ಜಿಲ್ಲೆಯ ವೆಂಕಟಾಪುರ ಎಂಬಲ್ಲಿ ನಡೆದಿದೆ.
ಕರ್ತವ್ಯ ಹಂಚಿಕೆ ವಿಚಾರವಾಗಿ CRPF ಸಬ್ ಇನ್ಸ್‌ಪೆಕ್ಟರ್ ಉಮೇಶ್ ಚಂದ್ರ (45) ನನ್ನು ತನ್ನ ಸಹೋದ್ಯೋಗಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

CRPF ಹೆಡ್‌ ಕಾನ್‌ಸ್ಟೆಬಲ್ ಸ್ಟೀಫನ್ ಎಂಬುವರು ಕರ್ತವ್ಯ ಹಂಚಿಕೆ ವಿಷಯವಾಗಿ ಉಮೇಶ್ ಚಂದ್ರ ಅವರ ಜೊತೆ ಜಗಳವಾಡಿ ಸ್ವಯಂಚಾಲಿತ ಬಂದೂಕಿನಿಂದ ಉಮೇಶ್‌ ಚಂದ್ರ ಅವರ ಹೊಟ್ಟೆ ಹಾಗೂ ತಲೆಗೆ ಗುಂಡಿಕ್ಕಿದ್ದಾರೆ. ಇದರಿಂದ ಉಮೇಶ್ ಚಂದ್ರ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಟಿಫನ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಮುಲಗು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಉಮೇಶ್‌ ಚಂದ್ರ ಬಿಹಾರದವರಾಗಿದ್ದು, ಸ್ಟೀಫನ್ ತಮಿಳುನಾಡು ಮೂಲದವರು. ಸಿಆರ್‌ಪಿಎಫ್‌ನ 39 ನೇ ಬೆಟಾಲಿಯನ್‌ನಲ್ಲಿ ಈ ಇಬ್ಬರೂ ಕಾರ್ಯನಿರ್ವಹಿಸುತ್ತಿದ್ದರು.

Join Whatsapp
Exit mobile version