Home ಟಾಪ್ ಸುದ್ದಿಗಳು ಬಲಪಂಥೀಯರು ಮಾಡುವ ಟೀಕೆ ನಮ್ಮ ಸರ್ಕಾರ ಸರಿಯಾದ ಹಾದಿಯಲ್ಲಿದೆ ಎಂಬುದಕ್ಕೆ ಸಾಕ್ಷಿ: ಸ್ಟಾಲಿನ್

ಬಲಪಂಥೀಯರು ಮಾಡುವ ಟೀಕೆ ನಮ್ಮ ಸರ್ಕಾರ ಸರಿಯಾದ ಹಾದಿಯಲ್ಲಿದೆ ಎಂಬುದಕ್ಕೆ ಸಾಕ್ಷಿ: ಸ್ಟಾಲಿನ್

ಚೆನ್ನೈ: ತೀವ್ರಗಾಮಿ ಬಲಪಂಥೀಯರಿಂದ ಬಂದ ಟೀಕೆಗಳು ಡಿಎಂಕೆ ಸರ್ಕಾರ ಸರಿಯಾದ ಹಾದಿಯಲ್ಲಿದೆ. ಮತ್ತು ತಮಿಳುನಾಡು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

2021ರ ಮೇ ತಿಂಗಳಲ್ಲಿ ಸಿಎಂ ಆದ ಬಳಿಕ ಮೊದಲ ಬಾರಿಗೆ ಮಾಧ್ಯಮವೊಂದರಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತಾಡಿದ ಅವರು, ತವಿಮಿಳುನಾಡಿನಲ್ಲಿ ಡಿಎಂಕೆ ಸರಕಾರ ಆಡಳಿತ ಚುಕ್ಕಾಣಿ ಹಿಡಿದಾಗಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ವ್ಯವಸ್ಥಿತ ರೂಪದಲ್ಲಿ ಅಪಪ್ರಚಾರ, ಸಾಮಾಜಿಕ ಸೌಹಾರ್ದತೆ ಕದಡುವ ಸತತ ಯತ್ನ ನಡೆಸಲಾಗುತ್ತಿದೆ. ಇದು ತೀವ್ರಗಾಮಿ ಬಲಪಂಥೀಯರ ಮಸಲತ್ತು. ಇದರಿಂದಾಗಿ ನಮ್ಮ ಸರಕಾರ ಸರಿಯಾದ ದಾರಿಯಲ್ಲಿದೆ ಎಂದು ದೃಢೀಕರಣ ದೊರಕಿದಂತಾಗಿದೆ ಎಂದು ಹೇಳಿದರು.

ಪ್ರತಿನಿತ್ಯ ಬಲಪಂಥೀಯರು ನಮ್ಮ ಸರಕಾರದ ವಿರುದ್ಧ ವಿವಿಧ ರೀತಿಯ ಲೇವಡಿಗಳನ್ನು, ಟೀಕೆ-ಟಿಪ್ಪಣಿಗಳನ್ನು ಮಾಡುತ್ತಲೇ ಇರುತ್ತಾರೆ. ಇಂಥವರು ತಮಿಳರ ಹಿತಾಸಕ್ತಿಗೆ ವಿರುದ್ಧವಾಗಿ ಹಿಂದಿ ಭಾಷೆಯ ಹೇರಿಕೆಗೆ ವ್ಯವಸ್ಥಿತ ಸಂಚು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Join Whatsapp
Exit mobile version