Home ಟಾಪ್ ಸುದ್ದಿಗಳು ಫೇಸ್ ಬುಕ್ ನಲ್ಲಿ ಆರೆಸ್ಸೆಸ್ ಸಂಘಟನೆಯನ್ನು ವಿಮರ್ಶಿಸಿದ ಪಿ.ಎಫ್.ಐ. ನಾಯಕನ ಬಂಧನ

ಫೇಸ್ ಬುಕ್ ನಲ್ಲಿ ಆರೆಸ್ಸೆಸ್ ಸಂಘಟನೆಯನ್ನು ವಿಮರ್ಶಿಸಿದ ಪಿ.ಎಫ್.ಐ. ನಾಯಕನ ಬಂಧನ

ಇದು ಉತ್ತರ ಪ್ರದೇಶದಲ್ಲಲ್ಲ, ಕೇರಳದಲ್ಲಿ !

ಮಲಪ್ಪುರಂ: ಆರೆಸ್ಸೆಸ್ ಮತ್ತು ಪೊಲೀಸ್ ವ್ಯವಸ್ಥೆಯನ್ನು ಫೇಸ್ ಬುಕ್ ನಲ್ಲಿ ವಿಮರ್ಶಿಸಿದ್ದನ್ನೇ ನೆಪವಾಗಿಟ್ಟು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಮುಖಂಡ ಒಬ್ಬರನ್ನು ಕೇರಳ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಬಂಧನ ನಡೆದಿರುವುದು ಉತ್ತರ ಪ್ರದೇಶದಲ್ಲಲ್ಲ, ಬದಲಾಗಿ ಆರೆಸ್ಸೆಸ್ ಗೆ ಹಿಡಿತವಿಲ್ಲದ ಕೇರಳದಲ್ಲಿ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಬಂಧಿತರನ್ನು ಇಡುಕ್ಕಿಯ ಕಟ್ಟಪ್ಪನ ನಿವಾಸಿ ಉಸ್ಮಾನ್ ಹಮೀದ್ ಎಂದು ಗುರುತಿಸಲಾಗಿದ್ದು, ಇವರು ಪಿ.ಎಫ್.ಐ ನ ಇಡುಕ್ಕಿ ಜಿಲ್ಲಾ ಸಮಿತಿ ಸದಸ್ಯ ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಟ್ಟಪ್ಪನ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಉಸ್ಮಾನ್ ಹಮೀದ್ ಅವರ ಬಂಧನವನ್ನು ಕೇರಳದ ಹಲವು ಸಂಘ ಸಂಸ್ಥೆಗಳು ಖಂಡಿಸಿದ್ದು, ಹಿಂಸಾಕೃತ್ಯದಲ್ಲಿ ತೊಡಗಿರುವ ಆರೆಸ್ಸೆಸ್ ವಿರುದ್ಧ ಧ್ವನಿ ಎತ್ತುವವರನ್ನು ಎಡಪಂಥೀಯ ಸರ್ಕಾರ ಅಧಿಕಾರದಲ್ಲಿರುವ ಕೇರಳದಲ್ಲಿ ಬಂಧಿಸುತ್ತಿರುವುದು ದುರದೃಷ್ಟಕರ ಎಂದು ಟೀಕಿಸಿವೆ.

ಸಾಮಾಜಿಕ ಜಾಲತಾಣಗಳಲ್ಲೂ ಕೇರಳ ಸರ್ಕಾರದ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ಉತ್ತರ ಪ್ರದೇಶದಲ್ಲಲ್ಲ, ಕೇರಳದಲ್ಲಿ ನಡೆದಿರುವುದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version