ಮಂಗಳೂರು: ಮೆಸ್ಕಾಂ ಮಣ್ಣಗುಡ್ಡದ ಉಪವಿಭಾಗದ ವತಿಯಿಂದ “ಕ್ರಿಕೆಟ್ ಪಂದ್ಯಾವಳಿ” ಯು ದಿನಾಂಕ 30-10-2022, ರವಿವಾರ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಿತು. ಮೆಸ್ಕಾಂ ಮಣ್ಣಗುಡ್ಡದ ಉಪವಿಭಾಗದ ಅಧಿಕಾರಿಗಳು ಹಾಗು ಸಿಬ್ಬಂದಿ ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ಪಂದ್ಯದಲ್ಲಿ ಕೊಟ್ಟಾರ ಶಾಖೆ ಪ್ರಥಮ ಸ್ಥಾನ ಹಾಗೂ ಕುಂಟಿಕಾನ್ ಶಾಖೆ ದ್ವಿತೀಯ ಸ್ಥಾನ ಪಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಉಪವಿಭಾಗಧಿಕಾರಿ ಶಿಲ್ಪ ಶೆಟ್ಟಿ, ವಿವಿಧ ಶಾಖೆಗಳ ಶಾಖಾಧಿಕಾರಿಗಳಾದ ಸುಬ್ರಹ್ಮಣ್ಯ, ನವೀನ್ ಕುಮಾರ್, ವಿನೋದ್, AE ಚೆನ್ನೇಶ್, ಸಂಪತ್, SB ಪಾಟೀಲ್, ಕರಿಬಸಪ್ಪ, ಮಂಜುನಾಥ್, ಪುಟ್ಟೇಗೌಡ, ಮನೋಜ್ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.