ಯಂಗ್ ಫ್ರೆಂಡ್ಸ್ ಕ್ರಿಕೆಟರ್ಸ್ ಅಮೆಮಾರ್ ವತಿಯಿಂದ 25 ನೇ ವರ್ಷದ ಬೆಳ್ಳಿಹಬ್ಬ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ, ಸನ್ಮಾನ ಕಾರ್ಯಕ್ರಮ

Prasthutha|

- Advertisement -

ಫರಂಗಿಪೇಟೆ: ಯಂಗ್ ಫ್ರೆಂಡ್ಸ್ ಕ್ರಿಕೆಟರ್ಸ್ ಅಮೆಮಾರ್ ವತಿಯಿಂದ 25 ನೇ ವರ್ಷಾಚರಣೆಯ ಬೆಳ್ಳಿಹಬ್ಬದ ಪ್ರಯುಕ್ತ ನಾಲ್ಕು ದಿನದ ಲೀಗ್ ಕ್ರಿಕೆಟ್ ಪಂದ್ಯಾಟ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅಮೆಮಾರ್ ತಂಡೇಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು

ಲೀಗ್ ಪಂದ್ಯಾಟದಲ್ಲಿ ಡಿವಿಸಿ ಶಾಂತಿ ಅಂಗಡಿ ತಂಡ ರನ್ನರ್ ಆಫ್ ಪ್ರಶಸ್ತಿ ಪಡೆಯಿತು. ಯಂಗ್ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡ ದ್ವಿತೀಯ ಪ್ರಶಸ್ತಿ ಪಡೆಯಿತು,ಲಯನ್ಸ್ ಕ್ಲಬ್ ಚೇರ್ಮೇನ್ ಸುಮತಿ ಹೆಗ್ಡೆ ಹಾಗೂ ಹಸಿ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕೆ. ಇ. ಎಲ್ ಇಸ್ಮಾಯಿಲ್ ರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಂಗ್ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡದ ಅಧ್ಯಕ್ಷ ಎಫ್ಎ ಅಬ್ಬಾಸ್, ಎಮ್ಎಸ್ ಸಿದ್ದೀಕ್, ರಮ್ಲಾನ್ ಮಾರಿಪ್ಪಳ್ಳ, ಫಾರೂಕು ಫರಂಗಿಪೇಟೆ, ಇಕ್ಬಾಲ್ ಸುಜೀರ್, ಮುಸ್ತಫಾ ಅಮೆಮಾರ್, ಬಶೀರ್ ತಂಡೇಲ್, ಹೈದರ್ ಅಮೆಮ್ಮಾರ್, ಇಮ್ರಾನ್ ಇಮ್ಮು, ನಿಸಾರ್ ವಳವೂರು, ಸುಲೈಮಾನ್ ಅರಫಾ, ಸಿ. ಎಚ್ ಅಶ್ರಫ್, ಅಲ್ತಾಫ್ ತುಂಬೆ, ಶಾಫಿ ಲೀಡರ್, ಎಫ್ಐ ಹನೀಫ್, ಎ. ಎಮ್ ಹನೀಫ್, ಸಿಎಚ್ ಮನ್ಸೂರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Join Whatsapp