ಕೋಲ್ಕತ್ತಾ: ಪರಗಣ ಜಿಲ್ಲೆಗೆ ಸೇರಿದ ದತ್ತಪುಕುರ್ ದಲ್ಲಿ ಪಟಾಕಿ ತಯಾರಿಸುವ ಕಾರ್ಖಾನೆಯಲ್ಲಿ ನಿನ್ನೆ (ಭಾನುವಾರ) ಭಾರಿ ಸ್ಫೋಟ ಸಂಭವಿಸಿದ್ದು, ಕೊಳದಲ್ಲಿ ಮತ್ತೊಂದು ಮೃತದೇಹ ಪತ್ತೆಯಾದ ಹಿನ್ನೆಲೆ ಸಾವಿನ ಸಂಖ್ಯೆ 9ಕ್ಕೆ ಏರಿಕೆ ಆಗಿದೆ.
ಇನ್ನೂ ಹಲವು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಅಕ್ರಮ ಪಟಾಕಿ ಕಾರ್ಖಾನೆ ಮಾಲೀಕರ ಪಾಲುದಾರ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ತಲೆಯಿಲ್ಲದ ದೇಹ ಕೊಳದಲ್ಲಿ ಸಿಕ್ಕಿದ್ದು, ತಲೆಯು ಪಕ್ಕದ ಮನೆಯ ಅಂಗಳದಿಂದ ಪತ್ತೆಯಾಗಿದೆ, ಸ್ಫೋಟದ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಕೈ ಮತ್ತು ಎರಡು ಬೆರಳುಗಳು ಸಹ ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.