ಪಾಲಕ್ಕಾಡ್: ಸಿಪಿಐ(ಎಂ) ಸ್ಥಳೀಯ ನಾಯಕನನ್ನು ಅಪರಿಚಿತರ ತಂಡವೊಂದು ಬೈಕ್ನಲ್ಲಿ ಆಗಮಿಸಿ ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಘಟನೆ ಇಲ್ಲಿನ ಕುನ್ನಂಗಾಡ್ನಲ್ಲಿ ನಡೆದಿದೆ.
ಇಲ್ಲಿನ ಮರುತ ರೋಡ್ ಸಿಪಿಐ(ಎಂ) ಸ್ಥಳೀಯ ಸಮಿತಿ ಸದಸ್ಯ ಶಾಜಹಾನ್ ದುಷ್ಕರ್ಮಿಗಳಿಂದ ಕೊಲೆಯಾದ ಕಾರ್ಯಕರ್ತ.
ನಿನ್ನೆ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದ್ದು, ಸ್ವಾತಂತ್ರ್ಯೋತ್ಸವಕ್ಕೆ ಪೂರ್ವ ತಯಾರಿ ನಡೆಸಿ, ಮನೆಗೆ ಮರಳಲು ಕುನ್ನಂಗಾಡ್ ಜಂಕ್ಷನ್ ಬಳಿ ನಿಂತಿರುವಾಗ ಬೈಕ್ನಲ್ಲಿ ಆಗಮಿಸಿದ ಐವರ ತಂಡ ಈ ಕೃತ್ಯ ನಡೆಸಿದೆ.
ಫ್ಲೆಕ್ಸ್ ಅಳವಡಿಸುವ ವಿಚಾರವಾಗಿ ಈ ಹಿಂದೆ ನಡೆದ ವಾಗ್ವಾದವೇ ಕೊಲೆಗೆ ಕಾರಣ ಎಂದಿರುವ ಸಿಪಿಐಎಂ, ಕೊಲೆಯ ಹಿಂದೆ ಆರೆಸ್ಸೆಸ್ನ ಕೈವಾಡವಿದೆ ಎಂದು ಆರೋಪಿಸಿದೆ.
ಮೃತ ಶಾಜಹಾನ್ ಪತ್ನಿ ಆಯಿಷಾ, ಮಕ್ಕಳಾದ ಶಾಹಿರ್, ಶಕೀರ್, ಶಿಫಾನಾರನ್ನು ಅಗಲಿದ್ದಾರೆ.