CPIM ಹಿರಿಯ ಸದಸ್ಯ ಮೋನಪ್ಪ ಬಂಗೇರ ನಿಧನ

Prasthutha|

ಮಂಗಳೂರು: ಸಿಪಿಎಂ ಪಕ್ಷದ ಹಿರಿಯ ಸದಸ್ಯ, ಬಜಾಲ್ ಜಲ್ಲಿಗುಡ್ಡ ಪ್ರದೇಶದ ನಿವಾಸಿ ಮೋನಪ್ಪ ಬಂಗೇರ ದೀರ್ಘಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ಬುಧವಾರ ನಿಧನರಾಗಿದ್ದಾರೆ.

- Advertisement -


ಅವರಿಗೆ 78 ವರ್ಷ ವಯಸ್ಸಾಗಿತ್ತು. ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಗೆ ಅವರು ಆಕರ್ಷಿತರಾಗಿದ್ದರು. ತಮ್ಮ ಯೌವನದಲ್ಲಿ ಹೆಂಚು ಕಾರ್ಮಿಕರಾಗಿ ಈ ಕ್ಷೇತ್ರದ ಕಾರ್ಮಿಕರ ಅನೇಕ ಹೋರಾಟಗಳಲ್ಲಿ ಪಾತ್ರ ವಹಿಸಿದ್ದರು. ಪಕ್ಕಲಡ್ಕ ಯುವಕ ಮಂಡಲ ಹಾಗೂ ಜನತಾ ವ್ಯಾಯಾಮ ಶಾಲೆಗಳಲ್ಲೂ ಪದಾಧಿಕಾರಿಗಳಾಗಿದ್ದರು. ಬಜಾಲ್ ಪ್ರದೇಶದ ದುಡಿಯುವ ವರ್ಗದ ಚಳವಳಿಯ ಬೆಳವಣಿಗೆಯಲ್ಲಿಯೂ ಅವರ ಕೊಡುಗೆ ಇದೆ. ಸರಳ ಬದುಕಿನ ಸಜ್ಜನರಾಗಿದ್ದರು.


ಪಕ್ಷಕ್ಕಾಗಿ ಹಾಗೂ ಜನರಿಗಾಗಿ ಮಾಡಿದ ಸೇವೆಯನ್ನು ಗುರುತಿಸಿ, 2017ರಲ್ಲಿ ಜಪ್ಪಿನಮೊಗರುನಲ್ಲಿ ಜರುಗಿದ CPIM ಮಂಗಳೂರು ನಗರ ಸಮ್ಮೇಳನದಲ್ಲಿ ಕಾಂ.ಮೋನಪ್ಪ ಬಂಗೇರರವರನ್ನು ಗೌರವಿಸಲಾಗಿತ್ತು. ತನ್ನ ಕೊನೆಯ ಉಸಿರಿನರೆಗೂ ಸಿಪಿಐಎಂ ಪಕ್ಷದ ಸದಸ್ಯರಾಗಿದ್ದ ಅವರ ಅಗಲುವಿಕೆ ಬಜಾಲ್ ಗ್ರಾಮದ ಕಾರ್ಮಿಕ ವರ್ಗದ ಚಳುವಳಿಗೆ ತುಂಬಲಾರದ ನಷ್ಟವಾಗಿದೆ ಎಂದು CPIM ತಿಳಿಸಿದೆ.

- Advertisement -


ಅಂತ್ಯಕ್ರಿಯೆಯಲ್ಲಿ CPIM ದ.ಕ.ಜಿಲ್ಲಾ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್,CPIM ಮಂಗಳೂರು ನಗರ ಮುಖಂಡರಾದ ಸುರೇಶ್ ಬಜಾಲ್, ಸ್ಥಳೀಯ CPIM ನಾಯಕರಾದ ಅಶೋಕ್ ಸಾಲ್ಯಾನ್, ದೀಪಕ್ ಬಜಾಲ್, ವರಪ್ರಸಾದ್, ಜಯಪ್ರಕಾಶ್, ಮೋಹನ್ ಜಲ್ಲಿಗುಡ್ಡ ಮುಂತಾದವರು ಹಾಜರಿದ್ದರು.
ಮೋನಪ್ಪ ಬಂಗೇರರವರು ಪತ್ನಿ, ಇಬ್ಬರು ಹೆಣ್ಣು, ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Join Whatsapp