ಸೆಗಣಿ ಕಾಯಲು ರಕ್ಷಣಾ ಸಿಬ್ಬಂದಿ, ಸಿಸಿಟಿವಿ ಅಳವಡಿಕೆ | ಹೀಗೊಂದು ವಿಚಿತ್ರ!

Prasthutha|


ರಾಯ್ಪುರ್​: ಅಪರಾಧಗಳನ್ನು ತಡೆಯಲೆಂದು ಸಿಸಿಟಿವಿ ಕ್ಯಾಮೆರಾಗಳನ್ನು ಸಾಮಾನ್ಯವಾಗಿ ಬೀದಿ ಬದಿಗಳಲ್ಲಿ ಅಳವಡಿಸಲಾಗುತ್ತದೆ. ಆದರೆ, ಅದೇ ಸಿಸಿಟಿವಿ ಕ್ಯಾಮೆರಾವನ್ನು ಹಸುವಿನ ಸಗಣಿಯ ರಕ್ಷಣೆಗಾಗಿ ಚತ್ತೀಸ್ ಗಢದ ಸರ್ಕಾರ ಬಳಸುತ್ತಿದೆ.

- Advertisement -

ಛತ್ತೀಸ್​ಗಢದಲ್ಲಿ ಸಗಣಿಗೆ ಭಾರಿ ಬೇಡಿಕೆ ಇರುವುದರಿಂದ ಸರ್ಕಾರ ಕಳೆದ ವರ್ಷ ‘ಗೌಧನ್ ನ್ಯಾಯ ಯೋಜನೆ’ ಅನ್ನು ಜಾರಿ ಮಾಡಿದ್ದು, ಒಂದು ಕೆಜಿ ಸಗಣಿಯನ್ನು 1.5 ರೂ.ಗೆ ಸರ್ಕಾರ ಪಡೆದುಕೊಳ್ಳುತ್ತಿರುವುದರಿಂದ ಈ ರಾಜ್ಯದಲ್ಲಿ ಸಗಣಿಗೆ ಭಾರಿ ಬೇಡಿಕೆ ಇದೆ.

ಸರ್ಕಾರದ ಈ ಯೋಜನೆಯಿಂದ ಸಗಣಿ ಕಳ್ಳತನ ಮಾಡುವವರು ಕೂಡಾ ಹೆಚ್ಚಾಗಿದ್ದಾರೆ. ಇಲ್ಲಿ ರಾತ್ರೋರಾತ್ರಿ ಸಗಣಿಯ ರಾಶಿಗಳು ಕಳವಾಗುತ್ತಿವೆ. ಇದೀಗ ಸಗಣಿ ಕಳ್ಳರು ಛತ್ತೀಸ್​ಗಢದಲ್ಲಿ ಸಾಮಾನ್ಯವಾಗಿಬಿಟ್ಟಿದ್ದಾರೆ.

- Advertisement -

ಅಂಬಿಕಾಪುರ ಪುರಸಭೆಯ ಸ್ಥಳೀಯ ಸರ್ಕಾರಿ ಗೌ-ಧನ್ ಕೇಂದ್ರದಲ್ಲಿ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಈ ಕೇಂದ್ರದಿಂದ ಸಗಣಿಯನ್ನು ಕದಿಯಲಾಗುತ್ತಿದೆ.

ಇತ್ತೀಚೆಗೆ ಸಗಣಿ ಕದಿಯುತ್ತಿದ್ದ ಐವರು ಮಹಿಳೆಯರನ್ನು ಬಂಧಿಸಿ ಅವರಿಂದ ಬರೋಬ್ಬರಿ 45 ಕೆಜಿ ಸಗಣಿಯನ್ನು ವಶಕ್ಕೆ ಪಡೆಯಲಾಗಿತ್ತು. ನಿರಂತರವಾಗಿ ನಡೆಯುತ್ತಿರುವ ಕಳ್ಳತನದಿಂದಾಗಿ ಅಧಿಕಾರಿಗಳಿಗೆ ತಲೆ ನೋವಾಗಿದೆ. ಹೀಗಾಗಿ ಸಗಣಿ ಕಳ್ಳತನಕ್ಕೆ ಬ್ರೇಕ್​ ಹಾಕಲೇಬೇಕೆಂದು ಹಠದಲ್ಲಿರುವ ಅಧಿಕಾರಿಗಳು ಗೌ-ಧನ್ ಕೇಂದ್ರದ ಸುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದ್ದಾರೆ. ಗೌ-ಧನ್ ಕೇಂದ್ರದ ಸುತ್ತ ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಲು ಯೋಜನೆ ರೂಪಿಸಿದ್ದಾರೆ.

Join Whatsapp