Home ಕರಾವಳಿ ಟೋಲ್ ನಲ್ಲಿ ಹಸು ಮಲಗಿದ್ದೇ ಅಂಬುಲೆನ್ಸ್ ಪಲ್ಟಿಯಾಗಲು ಕಾರಣ: ಚಾಲಕನ ಹೇಳಿಕೆ

ಟೋಲ್ ನಲ್ಲಿ ಹಸು ಮಲಗಿದ್ದೇ ಅಂಬುಲೆನ್ಸ್ ಪಲ್ಟಿಯಾಗಲು ಕಾರಣ: ಚಾಲಕನ ಹೇಳಿಕೆ

ಉಡುಪಿ: ಟೋಲ್ ನಲ್ಲಿ ಹಸು ಮಲಗಿದ್ದೇ ನಾಲ್ವರು ಸಾವಿಗೀಡಾದ ಅಂಬುಲೆನ್ಸ್ ಅಪಘಾತಕ್ಕೆ ಕಾರಣ ಎಂದು ಚಾಲಕ ರೋಷನ್ ಹೇಳಿದ್ದಾರೆ.

ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಗೆ ನಿನ್ನೆ ಸಂಜೆ ಡಿಕ್ಕಿಯಾಗಿ ಆ್ಯಂಬುಲೆನ್ಸ್ ಪಲ್ಟಿಯಾಗಿ ನಾಲ್ವರು  ಸಾವನ್ನಪ್ಪಿ, ಗಾಯಗೊಂಡಿರುವ ಟೋಲ್ ಸಿಬ್ಬಂದಿ ಹಾಗೂ ಇತರ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ಈ ನಡುವೆ ಆಂಬುಲೆನ್ಸ್ ಚಾಲಕ ರೋಷನ್ ಆಂಬುಲೆನ್ಸ್ ಗೆ ಅಡ್ಡಲಾಗಿ ದನ ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ನಾನು ಉಡುಪಿಯ ಆದರ್ಶ ಆಸ್ಪತ್ರೆಗೆ ರೋಗಿ ಒಬ್ಬರನ್ನು ಶಿಫ್ಟ್ ಮಾಡಲು ವೇಗವಾಗಿ ಹೋಗುತ್ತಿದ್ದೆ. ಶಿರೂರಿನಲ್ಲಿ ಫಸ್ಟ್ ಗೇಟ್ ಸೆಕೆಂಡ್ ಗೇಟ್ ಸಿಗುತ್ತದೆ. ಎಮರ್ಜೆನ್ಸಿ ಲೈನ್ ನಲ್ಲಿ ಫಸ್ಟ್ ಗೇಟ್ ತೆಗೆದಿದ್ದಾರೆ. ಸೆಕೆಂಡ್ ಗೇಟ್ ತೆಗೆಯುವಾಗ ಅಡ್ಡಲಾಗಿ ದನ ಮಲಗಿತ್ತು. ಆಗ ನನಗೆ ಏನು ಮಾಡಲು ಸಾಧ್ಯವಾಗಲಿಲ್ಲ. ದನ ಮತ್ತು ಇಬ್ಬರು ಟೋಲ್ ಸಿಬ್ಬಂದಿ ಅಲ್ಲಿಯೇ ಇದ್ದರು. ಹೀಗಾಗಿ ಅಪಘಾತವಾಗಿ ವಾಹನ ಪಲ್ಟಿ ಆಗುತ್ತಿತ್ತು. ಈ ಭಯದಿಂದ ನಾನು ಹಿಂದುಗಡೆ ಬ್ರೇಕ್ ಹೊಡೆದ್ದರಿಂದ ಅಪಘಾತವಾಯಿತು ಎಂದಿದ್ದಾರೆ.

ಹೊನ್ನಾವರದಿಂದ ಕುಂದಾಪುರಕ್ಕೆ ಬರುತ್ತಿದ್ದ ಅಂಬುಲೆನ್ಸ್, ಚಾಲಕನ ಅತೀವೇಗ ಮತ್ತು ಅಜಾಗರೂಕತೆಯಿಂದ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.

ಅಂಬುಲೆನ್ಸ್ ಡಿಕ್ಕಿ ಹೊಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Whatsapp
Exit mobile version