ಪಶ್ಚಿಮ ಬಂಗಾಳ: ಯುವಕನೊಬ್ಬ ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ್ದು, ಹಸು ಪ್ರಾಣ ಕಳೆದುಕೊಂಡಿದೆ. ಈ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಿಂದ ತೀವ್ರ ರಕ್ತಸ್ರಾವವಾಗಿ ಹಸು ಸಾವನ್ನಪ್ಪಿದೆ ಎಂದು, ಕಾಮುಕನನ್ನು ಬಂಧಿಸಿದ ಪೊಲೀಸರು ತಿಳಿಸಿದ್ದಾರೆ.
ಪ್ರದ್ಯುತ್ ಭುವಿಯ ಎಂಬ 29 ವರ್ಷದ ಯುವಕ ದುಷ್ಕೃತ್ಯ ಎಸಗಿದವನಾಗಿದ್ದಾನೆ. ಮಧ್ಯರಾತ್ರಿ ನೆರೆಮನೆಯ ಆರ್ತಿ ಎಂಬವರ ಗರ್ಭಿಣಿ ಹಸುವಿನ ಮೇಲೆ, ಅದು ರೋದಿಸುತ್ತಿರುವಾಗಲೇ ಅತ್ಯಾಚಾರ ಎಸಗಿದ್ದಾನೆ. ಹಸು ತುಂಬು ಗರ್ಭಿಣಿಯಾದ ಕಾರಣ ಪ್ರತಿರೋದಿಸಲು ಶಕ್ತಿ ಸಾಲದು ಎಂದು ಲೆಕ್ಕಾಚಾರ ಹಾಕಿಯೇ ದುಷ್ಕೃತ್ಯ ಎಸಗಿದ್ದಾನೆ. ಗರ್ಭಿಣಿ ಕಾರಣದಿಂದಾಗಿಯೇ ತೀವ್ರ ರಕ್ತಸ್ರಾವಕ್ಕೊಳಗಾಗಿ ಹಸು ಮೃತಪಟ್ಟಿದೆ. ಪೊಲೀಸರು ಪ್ರದ್ಯುತ್ ಭೂಯಿಯನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈತ ಈ ಹಿಂದೆಯೂ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿರುವುದಾಗಿ ತಿಳಿದು ಬಂದಿದೆ.