ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೇ ಲಸಿಕೆ ಲಭ್ಯವಿಲ್ಲ !

Prasthutha|

ಮಂಗಳೂರು : ಭಾರತದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಸೊಂಕು ನಿಯಂತ್ರಣಕ್ಕೆ ದೇಶಾದ್ಯಂತ ಲಸಿಕೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಜನರಿಗೆ ಸಮರ್ಪಕವಾಗಿ ಲಸಿಕೆ ಪೂರೈಕೆ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲೆಯ ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಇಲ್ಲದಿರುವುದರಿಂದ ಕೇಂದ್ರಗಳ ಮುಂಭಾಗದಲ್ಲಿ ವ್ಯಾಕ್ಸಿನ್ ಬಂದ ಬಳಿಕ ದೂರವಾಣಿ ಮೂಲಕ ಮಾಹಿತಿ ನೀಡಲಾಗುವುದು ಎಂಬ ಸೂಚನಾ ಫಲಕ ಅಳವಡಿಸಲಾಗಿದೆ.

- Advertisement -

ಜಿಲ್ಲೆಗೆ ಪೂರೈಕೆ ಆಗುವ ವ್ಯಾಕ್ಸಿನ್ ಸಾರ್ವಜನಿಕರಿಗೆ ಸಾಕಾಗುತ್ತಿಲ್ಲ. ಎಲ್ಲಾ 45- 65 ವರ್ಷ ಮೇಲ್ಪಟ್ಟ ರಿಗೆ ಲಸಿಕೆ ಪೂರೈಕೆಯಾಗಿಲ್ಲ. ಆದರೆ ಜಿಲ್ಲೆಗೆ ಪೂರೈಕೆ ಆಗುವ ವ್ಯಾಕ್ಸಿನ್ ಎಷ್ಟು ಎಂಬುದು ಸಾರ್ವಜನಿಕರ ಪ್ರಶ್ನೆ.

ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಮುನ್ನೂರಕ್ಕೂ ಅಧಿಕ ವ್ಯಾಕ್ಸಿನ್ ಮುಗಿಯುತ್ತಿದ್ದರೂ ಜಿಲ್ಲೆಗೆ ಸರ್ಕಾರದಿಂದ ವ್ಯಾಕ್ಸಿನ್ ಪೂರೈಕೆಯಾಗುತ್ತಿಲ್ಲ.

ನಗರದ ಕೆಲವೊಂದು ಪ್ರಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ವಾಕ್ಸಿನ್ ಮುಗಿದ್ರೆ ಕೆಳವಡೆ ನಿನ್ನೆ ಮುಗಿದೆ. ದ.ಕ ಜಿಲ್ಲಾಧಿಕಾರಿ ಕೇಂದ್ರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ರೂ ಸರ್ಕಾರ ಸಮರ್ಪಕವಾಗಿ ವ್ಯಾಕ್ಸಿನ್ ಪೂರೈಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

- Advertisement -