Home ಟಾಪ್ ಸುದ್ದಿಗಳು ಇಂದಿನಿಂದ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಆರಂಭ

ಇಂದಿನಿಂದ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಆರಂಭ

Healthcare cure concept with a hand in blue medical gloves holding Coronavirus, Covid 19 virus, vaccine vial

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನ ಜೆಎನ್1 ರೂಪಾಂತರಿ ಸೋಂಕು ಅನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದ್ದು, ಒಟ್ಟಾರೆಯಾಗಿ 30 ಸಾವಿರ ಡೋಸ್ ಕೊರ್ಬೆವ್ಯಾಕ್ಸ್ ಲಸಿಕೆ ಸರಬರಾಜು ಮಾಡಿದೆ.

ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಪಡೆದು ಆರು ತಿಂಗಳು ಅಥವಾ 26 ತಿಂಗಳು ಪೂರೈಸಿದ ಬಳಿಕವೂ ಮುನ್ನೆಚ್ಚರಿಕೆ ಡೋಸ್ ಪಡೆಯದವರಿಗೆ ಈ ಲಸಿಕೆ ನೀಡಬಹುದು. 60 ವರ್ಷ ದಾಟಿದವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ಲಸಿಕೆಯನ್ನು ಪಡೆಯಬಹುದು. ಕೋವಿಡ್-19 ಲಸಿಕಾಕರಣದ ಮಾರ್ಗಸೂಚಿಯಂತೆಯೇ ಈ ಲಸಿಕೆಯನ್ನು ನೀಡಲಾಗುವುದು. ಜಿಲ್ಲಾ ಆಸ್ಪತ್ರೆಗಳು ಮತ್ತು ಜಿಲ್ಲಾ ಮಟ್ಟದಲ್ಲಿ ನಿರ್ಣಯಿಸಲಾದ ತಾಲೂಕು ಆಸ್ಪತ್ರೆಗಳಿಗೆ ಮಾತ್ರ ಹಂಚಿಕೆ ಮಾಡಿ ಲಸಿಕಾಕರಣ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು ನಗರ-840, ಬೆಂಗಳೂರು ಗ್ರಾಮಾಂತರ-480, ಬಿಬಿಎಂಪಿ-5,680, ಚಿಕ್ಕಬಳ್ಳಾಪುರ-520, ಕೋಲಾರ-680, ರಾಮನಗರ-440, ತುಮಕೂರು-1,300, ಬೆಳಗಾವಿ-2,280, ಧಾರವಾಡ-920, ಹಾವೇರಿ-780, ಉತ್ತರ ಕನ್ನಡ-660, ಬಳ್ಳಾರಿ-640, ಚಿತ್ರದುರ್ಗ-720, ದಾವಣಗೆರೆ-740, ಶಿವಮೊಗ್ಗ-820,ವಿಜಯನಗರ-560, ಬಾಗಲಕೋಟೆ-900, ವಿಜಯಪುರ-1,000, ಗದಗ-500, ಕೊಪ್ಪಳ-520, ಚಾಮರಾಜನಗರ-440, ಹಾಸನ-720, ಕೊಡಗು-220, ಮಂಡ್ಯ-720, ಮೈಸೂರು-1,360, ಚಿಕ್ಕಮಗಳೂರು-480, ದಕ್ಷಿಣ ಕನ್ನಡ-1,140, ಉಡುಪಿ-520, ಬೀದರ್-840, ಕಲಬುರಗಿ-1,280, ರಾಯಚೂರು-820, ಯಾದಗಿರಿ-480 ಡೋಸ್ ಹಂಚಲಾಗಿದೆ. ಒಟ್ಟು 30,000 ಡೋಸ್ ಲಸಿಕೆಯನ್ನು ಸರಬರಾಜು ಮಾಡಲಾಗಿದೆ.

Join Whatsapp
Exit mobile version