Home ಟಾಪ್ ಸುದ್ದಿಗಳು ಕೋವಿಡ್‌ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ : ಡಾ. ವಿ.ಕೆ. ಪೌಲ್‌

ಕೋವಿಡ್‌ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ : ಡಾ. ವಿ.ಕೆ. ಪೌಲ್‌

ನವದೆಹಲಿ : ಕೋವಿಡ್‌ ಮೂರನೇ ಅಲೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂಬ ಮಾಧ್ಯಮಗಳ ಸುಳ್ಳು ಸುದ್ದಿಗಳನ್ನು ತಜ್ಞರು ನಿರಾಕರಿಸಿದ್ದಾರೆ. ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಯಾವುದೇ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಪ್ರಧಾನಿಯವರ ಕೋವಿಡ್‌ ನಿರ್ವಹಣಾ ಸಮಿತಿ ಸದಸ್ಯ ಮತ್ತು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್‌ ಹೇಳಿದ್ದಾರೆ.

ಯಾವುದೇ ಒಂದು ಅಲೆ ನಿರ್ದಿಷ್ಟವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಪುರಾವೆಗಳಿಲ್ಲ. ಇಲ್ಲಿ ವರೆಗೆ ವಯಸ್ಕರಲ್ಲಿರುವಷ್ಟೇ ಸಿರೊಪ್ರೆವಲೆನ್ಸ್‌ ಮಕ್ಕಳಲ್ಲೂ ಕಂಡು  ಬಂದಿದೆ. ಅಂದರೆ, ದೊಡ್ಡವರಷ್ಟೇ ಮಕ್ಕಳೂ ಬಾಧಿತರಾಗಿದ್ದಾರೆ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ದೆಹಲಿ ಎಐಐಎಂಎಸ್‌ ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ಕೂಡ ಈ ವಿಷಯದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕೋವಿಡ್‌ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಕ್ಕೆ ಬಲವಾದ ಯಾವುದೇ ಸಾಕ್ಷಿಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಮಕ್ಕಳ ತಜ್ಞರ ಸಂಸ್ಥೆಯ ಪ್ರಕಾರ, ಪೋಷಕರ ಲಸಿಕೆ ಮಕ್ಕಳ ಮೇಲೆ ಇದೇ ರೀತಿಯ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಲಸಿಕೆ ವಿಷಯದಲ್ಲಿ ಪೋಷಕರು ಹಿಂಜರಿಯಬಾರದು. ಪೋಷಕರು ಲಸಿಕೆ ಪಡೆಯುವುದರಿಂದ ಮಕ್ಕಳಲ್ಲಿ ವೈರಸ್‌ ಹರಡುವುದನ್ನು ತಡೆಯಲು ಸಹಾಯಯ ಮಾಡುತ್ತದೆ ಎಂದು ಹೇಳಲಾಗಿದೆ.

Join Whatsapp
Exit mobile version