ಕಣ್ಣೆದುರೇ ನರಳುತ್ತಿದ್ದ ಕೋವಿಡ್ ಪೀಡಿತ ತಂದೆಯ ಪ್ರಾಣವುಳಿಸಲು ಹರ ಸಾಹಸ ಪಟ್ಟ ಮಗಳು ಮತ್ತು ಹೆದರಿಕೆಯಿಂದ ದೂರ ನಿಂತ ಪತ್ನಿ!

Prasthutha|

►ಮನ ಕಲಕುವ ವೀಡಿಯೋ ವೈರಲ್

- Advertisement -

ಆಂಧ್ರಪ್ರದೇಶ : ತನ್ನ ತಾಯಿ ಬೇಡವೆಂದು ತಡೆದರೂ ಕೊರೋನಾ ಸೋಂಕಿನಿಂದ ಒದ್ದಾಡುತ್ತಿರುವ ತಂದೆಗೆ ಮಗಳು ನೀರು ನೀಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದು, ಈ ಕರುಣಾಜನಕ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ನಡೆದಿದೆ.

ನೆಲದ ಮೇಲೆ ಮಲಗಿ ಉಸಿರಾಡಲು ಕಷ್ಟಪಡುತ್ತಿದ್ದ ತಂದೆಗೆ ನೀರು ನೀಡಲು ಹೊರಟ ಮಗಳನ್ನು ತಾಯಿ ತಡೆಯಲು ಪ್ರಯತ್ನಿಸುತ್ತಿರುವುದು ವೈರಲಾದ ವೀಡಿಯೋದಲ್ಲಿ ಕಾಣಬಹುದು. ತನ್ನ ತಾಯಿ ನೀರು ಕೊಡುವುದನ್ನು ತಡೆದರೂ ಮಗಳು ಕೊನೆಗೂ ಉಸಿರಾಡಲು ಒದ್ದಾಡುತ್ತಿದ್ದ ತಂದೆಗೆ ನೀರು ಕೊಡುವಲ್ಲಿ ಯಶಸ್ವಿಯಾಗಿದ್ದಾಳೆ. ಈ ಘಟನೆಯ ಹೃದಯವಿದ್ರಾವಕ ವೀಡಿಯೊ ವ್ಯಾಪಕ ವೈರಲ್ ಆಗಿದೆ, ತನ್ನ ತಂದೆಯ ದುಃಸ್ಥಿತಿಯನ್ನು ನೋಡಲು ಸಾಧ್ಯವಾಗದ ಮಗಳು ತಾಯಿಯಿಂದ ಬಿಡಿಸಿಕೊಂಡು ತಂದೆಗೆ ಸ್ವಲ್ಪ ನೀರನ್ನು ಕುಡಿಸುವ ದೃಶ್ಯ ಮನಕಲಕುವಂತಿದೆ. ನೀರು ಬಾಯಿಗೆ ಹಾಕಿದ ಕೆಲವೇ ಕ್ಷಣಗಳಲ್ಲಿ ತಮ್ಮ ಮಗಳು ಮತ್ತು ಹೆಂಡತಿಯ ಮುಂದೆ ತಂದೆ ಕೊನೆಯುಸಿರೆಳೆಯುವ ದೃಶ್ಯವನ್ನೂ ವೀಡಿಯೋದಲ್ಲಿ ಕಾಣಬಹುದು. ಮೃತರನ್ನು ಶ್ರೀಕಾಕುಲಂ ಜಿಲ್ಲೆಯ ಕೊಯನಪೇಟಮೂಲದ ಅಸಿರಾನಾಯ್ಡು (50) ಎಂದು ಗುರುತಿಸಲಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೋವಿಡ್ ಪರೀಕ್ಷೆ ನಡೆಸಿದಾಗ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು ಎನ್ನಲಾಗಿದೆ.

Join Whatsapp