ನವದೆಹಲಿ: ಭಾರತಕ್ಕೆ ಆಗಮಿಸುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಏಳು ದಿನಗಳ ಕ್ವಾರಂಟೈನ್ ಕಡ್ಡಾಯವಾಗಲಿದೆ ಎಂದು ಕೇಂದ್ರ ಸರ್ಕಾರ ತನ್ನ ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಿದೆ. ಕೋವಿಡ್ ನೆಗೆಟಿವ್ ವರದಿಯ ಹೊರತಾಗಿಯೂ ಈ ನಿಯಮ ಅನ್ವಯವಾಗಲಿದೆ ಎಂದು ಅದು ಹೇಳಿದೆ.
ಈ ನೂತನ ನಿಯಮ ಜನವರಿ 11 ರಿಂದ ಜಾರಿಗೆ ಬರಲಿವೆ.
ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು ದೇಶಕ್ಕೆ ಆಗಮಿಸಿದ ಎಂಟನೇ ದಿನಕ್ಕೆ RTPCR ಪರೀಕ್ಷೆಗೊಳಪಡಬೇಕಾಗುತ್ತದೆ
ಈ ಹಿಂದೆ ಕೋವಿಡ್ ಪ್ರಕರಣ ವ್ಯಾಪಕವಾಗಿರುವ ದೇಶಗಳಿಂದ ಆಗಮಿಸಿದ ಪ್ರಯಾಣಿಕರು ಆಗಮನದ ಬಳಿಕ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿತ್ತು.