ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಆಂಧ್ರದಲ್ಲಿ ಹೀಗೊಂದು ಸೆಗಣಿ ಎರಚುವ ಆಚರಣೆ !

Prasthutha|

ಆಂಧ್ರಪ್ರದೇಶ : ದೇಶದಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಆಂಧ್ರಪ್ರದೇಶದಲ್ಲಿ ಸೆಗಣಿ ಎರಚುವ ಆಚರಣೆಯೊಂದು ವೈರಲ್ ಆಗಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೈರುಪಾಲ ಗ್ರಾಮದಲ್ಲಿ ನಡೆದ ಈ ಆಚರಣೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ‘ಪಿಡಕಲ್ ವಾರ್’ ಎಂದು ಕರೆಯಲ್ಪಡುವ ಈ ಆಚರಣೆಯು ಸಾಮಾನ್ಯವಾಗಿ ಯುಗಾದಿಯ ಮರು ದಿನ ನಡೆಯುತ್ತದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದ  ಆಚರಣೆ ಸಾಮಾಜಿಕ ಜಾಲತಾಣದಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗಿದೆ.

- Advertisement -

ಜನರು ಎರಡು ಗುಂಪುಗಳಾಗಿ ನಿಂತು ಸೆಗಣಿಗಳನ್ನು ಪರಸ್ಪರ ಎಸೆಯಯವ ಈ ಆಚರಣೆಯಲ್ಲಿ ದೊಡ್ಡ ಜನಸಮೂಹವೇ ನೆರೆದಿದ್ದು, ಮಾಸ್ಕ್ ಧರಿಸದೆ,ಸಾಮಾಜಿಕ ಅಂತರವಿಲ್ಲದೆ ಕೋವಿಡ್ ಮುನ್ನೆಚ್ಚರಿಕೆಗಳನ್ನು ಪಾಲಿಸದೆ ಇರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

Join Whatsapp