ಜೆದ್ದಾ : ಸೌದಿ ಅರೇಬಿಯಾ ಕೋವಿಡ್ 19 ಲಸಿಕೆ ಪಡೆಯುವ ಮೊದಲ ದೇಶಗಳಲ್ಲಿ ಒಂದಾಗಿರಲಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಅಬ್ದುಲ್ಲಾ ಅಲ್ ಅಸ್ಸಿರಿ ಹೇಳಿದ್ದಾರೆ.
ವೈದ್ಯಕೀಯ ಸಂಶೋಧನೆಯಲ್ಲಿ ಅಂತಿಮ ಹಂತ ತಲುಪಿದ ಎರಡು ಅಥವಾ ಮೂರು ಲಸಿಕೆಗಳನ್ನು ಪ್ರಥಮ ಹಂತದಲ್ಲಿ ಪೂರೈಸುವಂತೆ ಸೌದಿ ಅರೇಬಿಯಾ ಒಪ್ಪಂದವೊಂದಕ್ಕೆ ಸಹಿ ಮಾಡಿದೆ ಎಂದು ಅವರು ಹೇಳಿದ್ದಾರೆ.
ಕೊರೊನ ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ನಾಗರಿಕರು ಆಸ್ಪತ್ರೆಗಳಿಗೆ ಭೇಟಿ ನೀಡುವಂತೆ ಅವರು ಕರೆ ನೀಡಿದ್ದಾರೆ.
ಆದಾಗ್ಯೂ, ಸೌದಿ ಅರೇಬಿಯಾದಲ್ಲಿ ದಿನ ನಿತ್ಯದ ಹೊಸ ಕೊರೊನ ಪ್ರಕರಣಗಳ ಪ್ರಮಾಣ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣವೂ ಹೆಚ್ಚಾಗುತ್ತಿದೆ. ದಿನಕ್ಕೆ 400 ಪ್ರಕರಣಗಳು ವರದಿಯಾಗುತ್ತಿದ್ದುದು ಈಗ 394ಕ್ಕೆ ಇಳಿಕೆಯಾಗಿದೆ. ಒಟ್ಟು 3,51,849 ಸೋಂಕಿತರಲ್ಲಿ, 3,38,708 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.