Home ಟಾಪ್ ಸುದ್ದಿಗಳು ಕೋವಿಡ್ ಲಸಿಕೆಯ ಪ್ರಮಾಣಪತ್ರದ ಫೋಟೋ ಇನ್ನು ಮುಂದೆ ಸಾಮಾಜಿಕ ತಾಣದಲ್ಲಿ ಹಾಕುವಂತಿಲ್ಲ! ಯಾಕೆ ಗೊತ್ತೇ?

ಕೋವಿಡ್ ಲಸಿಕೆಯ ಪ್ರಮಾಣಪತ್ರದ ಫೋಟೋ ಇನ್ನು ಮುಂದೆ ಸಾಮಾಜಿಕ ತಾಣದಲ್ಲಿ ಹಾಕುವಂತಿಲ್ಲ! ಯಾಕೆ ಗೊತ್ತೇ?

ನವದೆಹಲಿ : ಇಡೀ ದೇಶವೇ ಕಂಗಾಲಾಗಿರುವ ಇಂತಹ ಆಪತ್ಕಾಲದಲ್ಲಿ ಕೋವಿಡ್‌ ಲಸಿಕೆ ಪಡೆಯುವುದೇ ಒಂದು ಖುಷಿಯ ಸಂಗತಿ. ಹಾಗಂತ ಲಸಿಕೆ ಪಡೆದ ಖುಷಿಯಲ್ಲಿ ತಮ್ಮ ಲಸಿಕೆ ಪಡೆದ ಸರ್ಟಿಫಿಕೇಟ್‌ ನಿಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿರಾ? ಜೋಕೆ. ಯಾವುದೇ ಕಾರಣಕ್ಕೂ ನಿಮ್ಮ ಲಸಿಕೆ ಪಡೆದ ಸರ್ಟಿಫಿಕೇಸ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಈ ಬಗ್ಗೆ ಸರಕಾರವೇ ನಿರ್ದೇಶನ ನೀಡಿದೆ.

ಕೋವಿಡ್‌ ಲಸಿಕೆ ಪಡೆದ ಸರ್ಟಿಫಿಕೇಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ, ಅದರಲ್ಲಿರುವ ಪ್ರಾಮುಖ್ಯದ ಅಂಕಿ ಅಂಶಗಳು ಸೋರಿಕೆಯಾಗಬಹುದು ಎಂದು ಸರಕಾರ ಎಚ್ಚರಿಸಿದೆ. ಕೇಂದ್ರ ಗೃಹ ಸಚಿವಾಲಯ ಸೈಬರ್‌ ದೋಸ್ತ್‌ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಸಲಹೆಯನ್ನು ಪ್ರಕಟಿಸಿದೆ.

ಸೈಬರ್‌ ವಂಚಕರು ನಿಮ್ಮ ಮಾಹಿತಿಗಳನ್ನು ಪಡೆದು, ವಂಚಿಸಬಹುದು ಎಂದೂ ಎಚ್ಚರಿಸಲಾಗಿದೆ.

Join Whatsapp
Exit mobile version