Home ಟಾಪ್ ಸುದ್ದಿಗಳು ಕೋವಿಡ್ ಭೀತಿ: ಮಾಸ್ಕ್ ಧರಿಸಿ ಕಲಾಪಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಸಂಸದರು

ಕೋವಿಡ್ ಭೀತಿ: ಮಾಸ್ಕ್ ಧರಿಸಿ ಕಲಾಪಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಸಂಸದರು

ನವದೆಹಲಿ: ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಹಾಗೂ ದೇಶದಲ್ಲಿ ಒಮೈಕ್ರಾನ್ ಉಪತಳಿಗಳ ಪತ್ತೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಸಂಸದರು ಇಂದು ಮಾಸ್ಕ್ ಧರಿಸಿ ರಾಜ್ಯಸಭೆ ಕಲಾಪಗಳಲ್ಲಿ ಭಾಗವಹಿಸಿದರು.


ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ, ಚೀನಾ, ಅಮೆರಿಕಾ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ದೇಶದಲ್ಲಿ ಕೋವಿಡ್ ಉಲ್ಬಣಗೊಳ್ಳದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನದಟ್ಟಣೆ ಇರುವಲ್ಲಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಹಾಗೆಯೇ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ದೇಶದ ಜನತೆಗೆ ಹೇಳಲಾಗಿದೆ ಎಂದರು.


ಲೋಕಸಭಾ ಚೇಂಬರ್’ನ ಪ್ರವೇಶ ಸ್ಥಳದಲ್ಲಿ ಸಂಸದರಿಗೆ ಮಾಸ್ಕ್ ಗಳನ್ನು ಒದಗಿಸಲಾಗುತ್ತಿದೆ. ಎಲ್ಲರೂ ಅದನ್ನು ಪಡೆದುಕೊಂಡು ಧರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

Join Whatsapp
Exit mobile version