Home ಟಾಪ್ ಸುದ್ದಿಗಳು ಹೊಸ ವರ್ಷಾಚರಣೆಗೆ ಬ್ರೇಕ್ | ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆ...

ಹೊಸ ವರ್ಷಾಚರಣೆಗೆ ಬ್ರೇಕ್ | ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆ ವರೆಗೆ ರಾಜ್ಯಾದ್ಯಂತ ನಿಷೇಧಾಜ್ಞೆ : ಸಿಎಂ ಘೋಷಣೆ

ಬೆಂಗಳೂರು : ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ಮುಂದಾಗಿರುವ ರಾಜ್ಯ ಸರಕಾರ, ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಮುಂಜಾನೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬ್ರಿಟನ್ ನಲ್ಲಿ ಕಾಣಿಸಿಕೊಂಡ ಹೊಸ ರೂಪಾಂತರಿತ ಕೊರೊನ ವೈರಸ್ ಸೋಂಕು ತಡೆಯುವ ಸಲುವಾಗಿ ಕಠಿಣ ನಿಯಮಗಳನ್ನು ಪಾಲಿಸುವಂತೆ ರಾಜ್ಯದ ಜನತೆಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬ್ರಿಟನ್ ಕೊರೊನ ವೈರಸ್ ಆತಂಕದ ಹಿನ್ನೆಲೆಯಲ್ಲಿ ಇಂದು (ಗುರುವಾರ) ಮಧ್ಯಾಹ್ನ 12 ಗಂಟೆಯಿಂದ ನಾಳೆ ಮುಂಜಾನೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಾಗಿದೆ. ಇದಕ್ಕೆ ಎಲ್ಲರು ಸಹಕರಿಸಬೇಕು. ಹೊಸ ವರ್ಷ ಎಲ್ಲರಿಗೂ ನೆಮ್ಮದಿ ಮತ್ತು ಶಾಂತಿ ತರಲಿ ಎಂದು ಶುಭ ಹಾರೈಸಿದ್ದಾರೆ.

Join Whatsapp
Exit mobile version