Home ಟಾಪ್ ಸುದ್ದಿಗಳು ಕಾಶ್ಮೀರ | ಪ್ರೊಫೆಸರ್ ವಿರುದ್ಧದ UAPA ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ನ್ಯಾಯಾಲಯ

ಕಾಶ್ಮೀರ | ಪ್ರೊಫೆಸರ್ ವಿರುದ್ಧದ UAPA ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ನ್ಯಾಯಾಲಯ

ಜಮ್ಮು: ಸರ್ಕಾರಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಪ್ರಾಧ್ಯಾಪಕ ಅಬ್ದುಲ್ ಬಾರಿ ನಾಯ್ಕ್ ಅವರ ವಿರುದ್ಧ UAPA ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಲು ಜಮ್ಮು, ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ನಿರಾಕರಿಸಿದೆ.

ಅಬ್ದುಲ್ ಬಾರಿ ನಾಯ್ಕ್ ಅವರು ಸೇನೆ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಬಲಪ್ರಯೋಗ ಅಥವಾ ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳುವಂತೆ ಜನಸಾಮಾನ್ಯರನ್ನು ಪ್ರಚೋದಿಸಿದ್ದಾರೆ ಎಂದು ನ್ಯಾಯಾಧೀಶರು ತನ್ನ ಆದೇಶದಲ್ಲಿ ತಿಳಿಸಿದ್ದಾರೆ.

ಆರೋಪಿತ ಪ್ರಾಧ್ಯಾಪಕರು ಜನ ಸಾಮಾನ್ಯರು ಪ್ರತ್ಯೇಕತೆಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ಪೊಲೀಸ್, ಭದ್ರತಾ ಪಡೆ, ಜಿಲ್ಲಾಡಳಿತದ ವಿರುದ್ಧವೂ ಪ್ರಚೋದಿಸುತ್ತಿದ್ದಾರೆ ಎಂದು ನ್ಯಾಯಾಲಯವು ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಾಶ್ಮೀರದಲ್ಲಿ ವಾಸಿಸುವ ಜನರು ಮತ್ತು ದೇಶದ ಇತರ ಭಾಗದಲ್ಲಿ ವಾಸಿಸುವ ಜನರ ನಡುವೆ ದ್ವೇಷವನ್ನು ಹರಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ವೀಡಿಯೋ ತುಣುಕಗಳನ್ನು ಪೊಲೀಸರು ಸಲ್ಲಿಸಿದ್ದು, ಅವುಗಳನ್ನು ನ್ಯಾಯಾಲಯ ವೀಕ್ಷಿಸಿದೆ ಎಂದು ನ್ಯಾಯಮೂರ್ತಿ ಸಂಜಯ್ ಧರ್ ಅವರ ಪೀಠ ತಿಳಿಸಿದೆ.

ಅಬ್ದುಲ್ ಬಾರಿ ನಾಯ್ಕ್ ನ್ನು ಪೊಲೀಸರು ಕಳೆದ ವರ್ಷದ ಮಾರ್ಚ್ 7ರಂದು ಬಂಧಿಸಿದ್ದರು.

ಪ್ರಾಧ್ಯಾಪಕ ಅಬ್ದುಲ್ ಬಾರಿ ನಾಯ್ಕ್ ಅವರು ಅಲಿಘರ್ ಮುಸ್ಲಿಮ್ ವಿವಿಯಲ್ಲಿ ಸಮಾಜಶಾಸ್ತ್ರ, ಭೂಗೋಳ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಭೌಗೋಳಿಕ, ಮಹಿಳಾ ಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ.ಯನ್ನು ಪಡೆದಿದ್ದಾರೆ.

Join Whatsapp
Exit mobile version