Home ಟಾಪ್ ಸುದ್ದಿಗಳು ಸಿಡಿ ಸಂತ್ರಸ್ತ ಯುವತಿ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಲು ಕೋರ್ಟ್ ಅಧಿಕೃತ ಅನುಮತಿ

ಸಿಡಿ ಸಂತ್ರಸ್ತ ಯುವತಿ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಲು ಕೋರ್ಟ್ ಅಧಿಕೃತ ಅನುಮತಿ

ಬೆಂಗಳೂರು : ರಮೆಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿರುವ ಸಂತ್ರಸ್ತ ಯುವತಿಗೆ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆ ದಾಖಲಿಸಲು ಕೋರ್ಟ್ ಅಧಿಕೃತ ಆದೇಶ ನೀಡಿದೆ. 24ನೇ ಎಸಿಎಂಎಂ ನ್ಯಾಯಧೀಶರು ಈ ಕುರಿತು ಆದೇಶ ನೀಡಿದ್ದಾರೆ. ಸಿಆರ್ ಪಿಸಿ ನಿಯಮ 164ರ ಅಡಿಯಲ್ಲಿ ಹೇಳಿಕೆ ಪಡೆಯಲು ಅನುಮತಿ ನೀಡಿದ್ದು, ಯುವತಿ ನ್ಯಾಯಾಲಯಕ್ಕೆ ತನ್ನ ಹೇಳಿಕೆ ನೀಡಿದ ಬಳಿಕ ತನಿಖಾಧಿಕಾರಿಗಳು ಹೇಳಿಕೆ ಪಡೆಯಬಹುದು  ಎಂದು ಕೂಡಾ ನ್ಯಾಯಾಲಯ ಹೇಳಿದೆ. ಈ ವೇಳೆ ತನಿಖಾಧಿಕಾರಿಗಳು ಆಕೆಯ ಮೇಲೆ ಒತ್ತಡ ಹೇರುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಯುವತಿ ಇಂದು ಯಾವುದೇ ಕ್ಷಣದಲ್ಲಿ ಬೇಕಾದರೂ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಇದೆ.

ಯುವತಿ ಪರ ವಕೀಲ ಜಗದೀಶ್ ಗೌಡ ವಾದ ಮಂಡನೆ ಮಾಡಿದ್ದು, ಯುವತಿಗೆ ಸಿಟ್ ಮತ್ತು ತನಿಖಾಧಿಕಾರಿಗಳ ಮೇಲೆ ನಂಬಿಕೆಯಿಲ್ಲ. ಹಾಗಾಗಿ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಲು ಅನುಮತಿ ಕೋರಿದ್ದರು. ತನಿಖಾಧಿಕಾರಿ ಕವಿತಾ ಅವರು ಕೂಡಾ ಈ ವೇಳೆ ಹಾಜರಿದ್ದರು

Join Whatsapp
Exit mobile version