Home ಟಾಪ್ ಸುದ್ದಿಗಳು ‘ಸಚಿವ ಝಮೀರ್ ಅಹ್ಮದ್ ನಮಗೆ ನ್ಯಾಯ ಕೊಡಿಸಿಲ್ಲ’: ವಿಧಾನಸೌಧ ಮುಂಭಾಗ ಆತ್ಮಹತ್ಯೆಗೆ ಯತ್ನಿಸಿದ ದಂಪತಿ

‘ಸಚಿವ ಝಮೀರ್ ಅಹ್ಮದ್ ನಮಗೆ ನ್ಯಾಯ ಕೊಡಿಸಿಲ್ಲ’: ವಿಧಾನಸೌಧ ಮುಂಭಾಗ ಆತ್ಮಹತ್ಯೆಗೆ ಯತ್ನಿಸಿದ ದಂಪತಿ

ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ಕುಟುಂಬವೊಂದು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.


ಜೆಜೆಆರ್ ನಗರದ ನಿವಾಸಿ ಶಾಯಿಸ್ತಾ ಬಾನು ಹಾಗೂ ಮುಹಮದ್ ಮುನಾಯಿದ್ ಉಲ್ಲಾ ದಂಪತಿ ತಲೆ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ದಂಪತಿಯನ್ನು ತಡೆದಿದ್ದಾರೆ.


ಶಾಯಿಸ್ತಾ ದಂಪತಿಗೆ ಸೇರಿದ 3 ಕೋಟಿ ರೂ. ಬಿಲ್ಡಿಂಗ್ ಅನ್ನು ಕೇವಲ 1.41 ಕೋಟಿ ರೂ.ಗೆ ಹರಾಜು ಹಾಕಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕು. ಕಳೆದ ಎರಡು ವರ್ಷಗಳಿಂದ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಮನೆಗೆ ಅಲೆಯುತ್ತಿದ್ದೇವೆ. ನಮಗೆ ಝಮೀರ್ ಅವರು ನ್ಯಾಯ ಕೊಡಿಸಿಲ್ಲ ಎಂದು ದಂಪತಿ ಆರೋಪಿಸಿದ್ದಾರೆ.


2016ರಲ್ಲಿ ಶುಂಠಿ ಬೆಳೆಯಲು ಬೆಂಗಳೂರು ಕೋ ಆಪರೇಟೀವ್ ಬ್ಯಾಂಕ್ ನಿಂದ 50 ಲಕ್ಷ ರೂ. ಸಾಲ ಪಡೆದುಕೊಂಡಿದ್ದೆವು. ಅಂದಿನಿಂದ ಈ ವರೆಗೆ ಬಡ್ಡಿ ಸೇರಿ 90 ಲಕ್ಷ ರೂ. ಮರುಪಾವತಿಸಿದ್ದೇವೆ. ಆರ್ಥಿಕ ಸಮಸ್ಯೆಯಾಗುತ್ತಿದ್ದ ಕಾರಣ ಬಡ್ಡಿ ದರ ಕಡಿಮೆ ಮಾಡಿಸಿಕೊಡುವಂತೆ ಸಚಿವ ಜಮೀರ್ ಅಹ್ಮರ್ ಅವರ ಬಳಿ ಹೋಗಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಬ್ಯಾಂಕ್ ನಿಂದ ನಮಗೆ ಸೇರಿದ್ದ 3 ಕೋಟಿ ರೂ. ಮೌಲ್ಯದ ಬಿಲ್ಡಿಂಗ್ ಅನ್ನು 1.41 ಕೋಟಿ ರೂ.ಗಳಿಗೆ ಹರಾಜು ಹಾಕಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಶಾಯಿಸ್ತಾ ದಂಪತಿ ಪ್ರತಿಭಟಿಸಿದ್ದಾರೆ.

Join Whatsapp
Exit mobile version