Home ಟಾಪ್ ಸುದ್ದಿಗಳು ಮಗುವಿಗೆ ಚಿತ್ರಹಿಂಸೆ ನೀಡಿ ಹತ್ಯೆಗೈದ ದಂಪತಿ ಬಂಧನ

ಮಗುವಿಗೆ ಚಿತ್ರಹಿಂಸೆ ನೀಡಿ ಹತ್ಯೆಗೈದ ದಂಪತಿ ಬಂಧನ

ಮುಂಬೈ: 16 ತಿಂಗಳ ಮಗುವಿಗೆ ಚಿತ್ರಹಿಂಸೆ ನೀಡಿ ಕೊಲೆಗೈದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದ ಸಿಕಂದರಾಬಾದ್ ನ ದಂಪತಿಯನ್ನು ಸೋಲಾಪುರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಅವರು ಗುಜರಾತಿನ ರಾಜ್ ಕೋಟ್ ಗೆ ರೈಲಿನಲ್ಲಿ ಮಗುವಿನ ಮೃತದೇಹದೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.


ಮಗುವಿನ 26 ವರ್ಷದ ತಂದೆ ಕಳೆದ 3 ನೇ ತಾರೀಕಿನಂದು ಸಿಕಂದರಾಬಾದ್ ನಲ್ಲಿರುವ ತನ್ನ ಮನೆಯಲ್ಲಿ ತನ್ನ ಮಗಳನ್ನು ಚಿತ್ರಹಿಂಸೆ ನೀಡಿ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಅಂದಾಜಿಸಲಾಗಿದೆ. ಪೊಲೀಸರ ಪ್ರಕಾರ, ತಾಯಿಯೂ ಅಪರಾಧದಲ್ಲಿ ಭಾಗಿಯಾಗಿದ್ದಳು. ಮೃತದೇಹವನ್ನು ತನ್ನ ತಾಯ್ನಾಡಿಗೆ ತಂದು ವಿಲೇವಾರಿ ಮಾಡುವ ಯೋಜನೆಯಾಗಿತ್ತು ಎಂದು ತಿಳಿದುಬಂದಿದೆ.


ಪ್ರಯಾಣದ ಸಮಯದಲ್ಲಿ ಮಗುವಿಗೆ ಚಲನೆ ಇಲ್ಲದಿರುವುದನ್ನು ಗಮನಿಸಿ ಅನುಮಾನಗೊಂಡ ಪ್ರಯಾಣಿಕರು ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದರು.

Join Whatsapp
Exit mobile version