Home ಟಾಪ್ ಸುದ್ದಿಗಳು ದೇಶಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ: ಪರೇಡ್ ನಲ್ಲಿ ದೇಶದ ಶಕ್ತಿ ಪ್ರದರ್ಶನ

ದೇಶಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ: ಪರೇಡ್ ನಲ್ಲಿ ದೇಶದ ಶಕ್ತಿ ಪ್ರದರ್ಶನ

ನವದೆಹಲಿ: ಭಾರತವು 73ನೇ ಗಣರಾಜ್ಯೋತ್ಸವವನ್ನು ವರ್ಣರಂಜಿತವಾಗಿ ಆಚರಿಸಿತು. ಪ್ರಧಾನಮಂತ್ರಿಯವರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗೌರವ ಸಲ್ಲಿಸುವುದರೊಂದಿಗೆ ಆಚರಣೆಗಳಿಗೆ ಅಧಿಕೃತವಾಗಿ ಚಾಲನೆ ನೀಡಿದರು. ಕಟ್ಟುನಿಟ್ಟಾದ ಕೋವಿಡ್ ನಿಯಮಗಳನ್ನು ಅನುಸರಿಸಿ ಬುಧವಾರ ಬೆಳಿಗ್ಗೆ 10 ಗಂಟೆಗೆ ಗಣರಾಜ್ಯೋತ್ಸವ ಪರೇಡ್ ರಾಜಪಥ್ ನಲ್ಲಿ ಪ್ರಾರಂಭವಾಯಿತು.

ಭಾರತೀಯ ಸೇನಾ ಶಕ್ತಿಯನ್ನು ಪ್ರದರ್ಶಿಸಲ್ಪಡುವ ಮೆರವಣಿಗೆಯಲ್ಲಿ ರಾಷ್ಟ್ರಪತಿಯವರು ಗೌರವ ವಂದನೆ(ಸಲ್ಯೂಟ್) ಯನ್ನು ಸ್ವೀಕರಿಸಿದರು.

ಈ ಬಾರಿಯ ಪರೇಡ್ ನಲ್ಲಿ 25 ಸ್ತಬ್ಧ ಚಿತ್ರಗಳು ಇದ್ದವು. ಜೊತೆಗೆ ಭಾರತೀಯ ವಾಯುಪಡೆಯ 75 ವಿಮಾನಗಳ ಭವ್ಯ ಫ್ಲೈ ಫಾಸ್ಟ್ ಮತ್ತು ಸ್ಪರ್ಧೆಯ ಮೂಲಕ ಆಯ್ಕೆ ಮಾಡಿದ 480 ನೃತ್ಯಗಾರರ ಪ್ರದರ್ಶನಗಳು ಪರೇಡ್ ನ ಪ್ರಮುಖ ಆಕರ್ಷಣೆಗಳಾಗಿದ್ದವು. ಇದಲ್ಲದೆ, ಪ್ರೇಕ್ಷಕರ ಅನುಕೂಲದ ದೃಷ್ಟಿಯಿಂದ ಮೊದಲ ಬಾರಿಗೆ ಹತ್ತು ದೊಡ್ಡ ಎಲ್ ಇಡಿ ಪರದೆಗಳನ್ನು ಸಹ ಇಲ್ಲಿ ಸ್ಥಾಪಿಸಲಾಗಿತ್ತು.

Join Whatsapp
Exit mobile version