Home ಟಾಪ್ ಸುದ್ದಿಗಳು ಭ್ರಷ್ಟಾಚಾರ, ಮಾಲಿನ್ಯ…  ಭಾರತದಲ್ಲಿನ ವಾಸ್ತವ: ಎನ್ ಆರ್ ನಾರಾಯಣ ಮೂರ್ತಿ

ಭ್ರಷ್ಟಾಚಾರ, ಮಾಲಿನ್ಯ…  ಭಾರತದಲ್ಲಿನ ವಾಸ್ತವ: ಎನ್ ಆರ್ ನಾರಾಯಣ ಮೂರ್ತಿ

ಅಮರಾವತಿ: ಭ್ರಷ್ಟಾಚಾರ, ಮಾಲಿನ್ಯ ಎಂಬುದು ಭಾರತದಲ್ಲಿನ ವಾಸ್ತವ. ಸ್ವಚ್ಛ ರಸ್ತೆ ಮತ್ತು ಮಾಲಿನ್ಯ ರಹಿತತೆ ಎಂಬುದು ಸಿಂಗಾಪುರದಲ್ಲಿ ವಾಸ್ತವ.  ಆದರೆ ಹೊಸ ವಾಸ್ತವವನ್ನು ಸೃಷ್ಟಿಸುವುದು ವಿದ್ಯಾರ್ಥಿಗಳ  ಜವಾಬ್ದಾರಿ ಎಂದು ಇನ್ಫೊಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.

ಭಾನುವಾರ ಆಂಧ್ರ ಪ್ರದೇಶದ ವಿಜಯನಗಮ್ ಜಿಲ್ಲೆಯ ರಾಜಮ್ ನಲ್ಲಿರುವ ‘ಜಿಎಂಆರ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಜಿಎಂಆರ್ ಐಟಿ)’ಯ ರಜತ ಮಹೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರತೆಯನ್ನು ಬದಲಾವಣೆಗೆ ಅವಕಾಶವನ್ನಾಗಿ ನೋಡಬೇಕು. ನಿಮ್ಮನ್ನು ನೀವು ನಾಯಕನನ್ನಾಗಿ ಕಲ್ಪಿಸಿಕೊಳ್ಳಿ. ಯಾರಿಗೂ ಕಾಯಬೇಡಿ. ಯಾರೋ ಬೇರೆಯವರು ಇದನ್ನು ತೆಗೆದುಕೊಳ್ಳಲಿ ಎಂದು ನಿರೀಕ್ಷಿಸಬೇಡಿ. ನೀವು ಏನು ಮಾಡುತ್ತೀರಿ ಎಂಬುದೇ ವಾಸ್ತವ’ ಎಂದರು.

ಭಾರತದಲ್ಲಿ ವಾಸ್ತವ ಅಂದರೆ… ಭ್ರಷ್ಟಾಚಾರ, ಕೊಳಕು ರಸ್ತೆಗಳು, ಮಾಲಿನ್ಯ ಮತ್ತು ಬಹುತೇಕ ಸಂದರ್ಭದಲ್ಲಿ ವಿದ್ಯುತ್ ಇಲ್ಲದೇ ಇರುವುದೇ ಆಗಿದೆ. ಅದೇ ಸಿಂಗಾಪುರದಲ್ಲಿ ವಾಸ್ತವ ಅಂದರೆ, ಸ್ವಚ್ಛ ರಸ್ತೆ, ಮಾಲಿನ್ಯ ರಹಿತತೆ, ನಿರಂತರ ವಿದ್ಯುತ್. ಆದ್ದರಿಂದ, ಹೊಸ ವಾಸ್ತವವನ್ನು ಸೃಷ್ಟಿಸುವುದು ನಿಮ್ಮ (ವಿದ್ಯಾರ್ಥಿಗಳ) ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಜಿಎಂಆರ್ ಗ್ರೂಪ್ ಅಧ್ಯಕ್ಷ ಜಿ ಎಂ ರಾವ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳು ಅವರಿಂದ ಸ್ಫೂರ್ತಿ ಪಡೆಯಬೇಕು. ಸಾಧ್ಯವಾದರೆ ಉದ್ಯಮಿಗಳಾಗಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು. ಕಡಿಮೆ ಸವಲತ್ತು ಹೊಂದಿರುವವರಿಗೆ ಸಹಾಯ ಮಾಡಲು ಉದ್ಯೋಗಗಳ ಸೃಷ್ಟಿಯೇ ಏಕೈಕ ಪರಿಹಾರವಾಗಿದೆ ಎಂದು  ಅವರು ಹೇಳಿದ್ದಾರೆ.

Join Whatsapp
Exit mobile version