ಐಪಿಎಲ್ ನಲ್ಲಿ ಮುಂದುವರಿದ ಕೋವಿಡ್ | ನಾಳೆಯ ಪಂದ್ಯವೂ ರದ್ದು !

Prasthutha|


ಹೊಸದಿಲ್ಲಿ : ದೇಶದಲ್ಲಿ ಬಿಗಿಯಾಗುತ್ತಿರುವ ಕೋವಿಡ್ ದಾಳಿ ಐಪಿಎಲ್ ಗೂ ಲಗ್ಗೆಇಟ್ಟಿದೆ. ಚೆನ್ನೈ ತಂಡದ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಚೆನ್ನೈ ಮತ್ತು ರಾಜಸ್ಥಾನ ನಡುವಿನ ಪಂದ್ಯಾಟವೂ ರದ್ದುಗೊಂಡಿದೆ. ನಿನ್ನೆಯಷ್ಟೆ ಕೋಲ್ಕಾತ್ತಾ ತಂಡದ ಇಬ್ಬರು ಆಟಗಾರರಿಗೆ ಕೊವಿಡ್ ಸೋಂಕು ದೃಡಪಟ್ಟ ಹಿನ್ನಲೆಯಲ್ಲಿ ಕೋಲ್ಕಾತ್ತಾ ಮತ್ತು ಬೆಂಗಳೂರು ನಡುವಿನ ಪಂದ್ಯವನ್ನು ರದ್ದು ಮಾಡಲಾಗಿತ್ತು.

- Advertisement -

ಕೊರೋನಾ ಉಲ್ಭಣ : ಐಪಿಎಲ್ ರದ್ದು?

ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಸಾವಿನ ಪ್ರಮಾಣವು ಏರುತ್ತಿದೆ ಆದರೆ ಈ ಮದ್ಯದಲ್ಲಿ ತೀವ್ರ ವಿರೋಧದ ನಡುವೆಯೂ ಐಪಿಎಲ್ ಪಂದ್ಯಾಟವು ಸಾಗುತ್ತಿದ್ದು, ಇದೀಗ ತಂಡದ ಪ್ರಮುಖರಲ್ಲಿ ಕೋವಿಡ್ ಸೋಂಕು ದೃಡಗೊಳ್ಳುತ್ತಿದೆ. ಇಂದಿನ ಹಾಗೂ ನಿನ್ನೆಯ ಪಂದ್ಯಾಟವು ಕೋವಿಡ್ ಕಾರಣದಿಂದ ರದ್ದಾಗುತ್ತಿದ್ದು ಇದೇ ರೀತಿ ರದ್ದುಗೊಳ್ಳಿಸಬೇಕಾದ ಪರಿಸ್ಥಿತಿ ಬಂದಲ್ಲಿ ಈ ವರ್ಷದ ಇಡೀ ಪಂದ್ಯಾಟವನ್ನೇ ರದ್ದುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಕುರಿತು ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Join Whatsapp