ಸುಪ್ರೀಂ ಕೋರ್ಟ್‌ನ ಶೇ 50ರಷ್ಟು ಸಿಬ್ಬಂದಿಗೆ ಕೊರೊನಾ

Prasthutha|

►ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ

- Advertisement -

ಹೊಸದಿಲ್ಲಿ : ಕೊರೋನಾ ಪರೀಕ್ಷೆಗೆ ಒಳಪಟ್ಟ ಸುಪ್ರೀಂ ಕೋರ್ಟಿನ ಸಿಬ್ಬಂದಿಗಳಲ್ಲಿ ಅರ್ಧದಷ್ಟು ಜನರಿಗೆ ಪಾಸಿಟೀವ್ ಬಂದಿರುವ ಹಿನ್ನೆಲೆಯಲ್ಲಿ ಇಂದಿನಿಂದ ವಿಚಾರಣೆಗಳನ್ನು ನ್ಯಾಯಮೂರ್ತಿಗಳು ಮನೆಯಿಂದಲೇ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಕೊರೋನಾ ಪರೀಕ್ಷೆಗೊಳಪಟ್ಟ 90 ಜನ ಕೋರ್ಟ್ ಸಿಬ್ಬಂದಿಗಳಲ್ಲಿ 44 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಿಂದ ನ್ಯಾಯಮೂರ್ತಿಗಳು ಆತಂಕಕ್ಕೆ ಒಳಗಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಇಡೀ ನ್ಯಾಯಾಲಯದ ಆವರಣವನ್ನು ಸ್ಯಾನಿಟೈಸ್​ ಮಾಡಲಾಗುತ್ತಿದ್ದು, ವಿಚಾರಣೆಯ ಸಮಯವನ್ನು ಒಂದು ಗಂಟೆಯ ಅವಧಿಗೆ ಮುಂದಕ್ಕೆ ಹಾಕಲಾಗಿದೆ ಎನ್ನಲಾಗಿದೆ.

- Advertisement -

10.30 ಕ್ಕೆ ಆರಂಭವಾಗಬೇಕಿದ್ದ ವಿಚಾರಣೆ 11.30 ಕ್ಕೆ ನಿಗದಿಪಡಿಸಲಾಯಿತು. 11 ಗಂಟೆಗೆ ಆರಂಭವಾಗಬೇಕಿದ್ದ ವಿಚಾರಣೆಗಳು 12 ಗಂಟೆಗೆ ಆರಂಭವಾದವು. ದ್ವಿಸದಸ್ಯ ಮತ್ತು ತ್ರಿಸದಸ್ಯ ನ್ಯಾಯಪೀಠಗಳನ್ನು ವಿಡಿಯೋ ಲಿಂಕ್​ಗಳ ಮೂಲಕ ಸಂಯೋಜಿಸಲಾಗುತ್ತಿದೆ.

Join Whatsapp