ನವದೆಹಲಿ: ಬಂಧನಕ್ಕೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯನಿಗೆ ಎಫ್ ಐಆರ್ ಮೆಮೋ ಪ್ರತಿಯನ್ನು ನೀಡಲಾಗಿದೆ ಎಂದು ಎನ್ ಐಎ- ರಾಷ್ಟ್ರೀಯ ತನಿಖಾ ಏಜೆನ್ಸಿಯು ದಿಲ್ಲಿ ಹೈಕೋರ್ಟಿಗೆ ಮಾಹಿತಿ ನೀಡಿದೆ.
ಚೆನ್ನೈ ನಿವಾಸಿ ಮುಹಮ್ಮದ್ ಯೂಸುಫ್ ರನ್ನು ಪಿಎಫ್ ಐ ಸಹಯೋಗಿ ಎಂದು ಸೆಪ್ಟೆಂಬರ್ 22ರಂದು ಕಾನೂನು ಬಾಹಿರ ತಡೆ ಕಾಯ್ದೆಯಡಿ ಬಂಧಿಸಲಾಗಿದ್ದು, ಅವರ ಅರ್ಜಿಯ ವಿಚಾರಣೆಯು ಜಸ್ಟಿಸ್ ಅನೂಪ್ ಕುಮಾರ್ ಮೆಂದಿರಾತ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆಗೆ ಬಂದಿತ್ತು. ಯೂಸುಫ್ ಅವರ ಮೇಲೆ ಉಗ್ರ ಕೃತ್ಯದ ಆರೋಪ ಹೊರಿಸಲಾಗಿತ್ತು.
ಎನ್ ಐಎ ಪರ ಹಾಜರಾದ ಎಸ್ ಪಿಪಿ- ವಿಶೇಷ ಪ್ರಾಸಿಕ್ಯೂಟರ್ ಅವರು ಎಫ್ ಐಆರ್ ಪ್ರತಿಗಳನ್ನು ಯೂಸುಫ್ ರಿಗೆ ಕಳಿಸಲಾಗಿದೆ ಎಂದು ಕೋರ್ಟಿಗೆ ತಿಳಿಸಿದರು. ರಿಮಾಂಡ್ ಅರ್ಜಿಯ ಪ್ರತಿ ಕೋರಿ ಮಾಡಿದ ಮನವಿಗೆ ಆರೋಪಿಯು ಯಾವ ಆರೋಪದ ಮೇಲೆ ಬಂಧಿಸಲಾಗಿದೆ ಎಂಬುದನ್ನು ತಿಳಿಸಲಾಗಿದೆ ಎಂದು ಕೋರ್ಟಿಗೆ ಮಾಹಿತಿ ನೀಡಲಾಯಿತು.
ಆರೋಪಿ ಪರ ವಕೀಲರು ನಮ್ಮ ಕಕ್ಷಿದಾರರು ಇಂದು ಜಾಮೀನು ಕೋರಿ ಮನವಿ ಸಲ್ಲಿಸಲು ಅವರನ್ನು ಯಾವ ಆರೋಪದ ಮೇಲೆ ಬಂಧಿಸಲಾಗಿದೆ ಎಂಬ ಸ್ಪಷ್ಟನೆಯೇ ಇಲ್ಲ ಎಂದು ಪೀಠದ ಗಮನಕ್ಕೆ ತಂದರು.
ಇದಕ್ಕೆ ಆಕ್ಷೇಪಿಸಿದ ಪ್ರಾಸಿಕ್ಯೂಟರರು ತನಿಖಾ ದಳವು, ಇನ್ನೂ ಮೊಕದ್ದಮೆಯ ತನಿಖೆಯ ಮೊದಲ ಹಂತದಲ್ಲಿದೆ ಎಂದು ಹೇಳಿದರು. ‘ರಿಮಾಂಡ್ ಮಾಹಿತಿಯನ್ನು ಪಡೆಯುವ ಹಕ್ಕು ಆರೋಪಿಗೆ ಇಲ್ಲ’ ಎಂದ ಪ್ರಾಸಿಕ್ಯೂಟರ್ ವಿಶೇಷ ನ್ಯಾಯಾಧೀಶರು ಇದನ್ನು ಸರಿಯಾದ ಎಲ್ಲ ರೀತಿಯಲ್ಲಿ ಗಮನಿಸುವಾಗ, ಕೋರ್ಟಿನಲ್ಲಿ ಪ್ರತಿಭಟನೆಯಂತಹ ವಿಷಯಕ್ಕೆ ಅವಕಾಶವಿಲ್ಲ ಎಂದರು.
“ಅರ್ಜಿದಾರರಿಗೆ ತುಂಬ ತುರ್ತು ಇದ್ದರೆ ಅವರು ಎಲ್ಲವನ್ನೂ ನ್ಯಾಯಾಧೀಶರಲ್ಲಿಯೇ ಕೇಳಬಹುದು ಎಂದ ಪ್ರಾಸಿಕ್ಯೂಟರ್ , ರಿಮಾಂಡ್ ಅರ್ಜಿಯು ಎಫ್ ಐಆರ್ ಜೊತೆಗೆ ಸಮೀಕರಿಸುವಂತಿಲ್ಲ ಎಂದು ಹೇಳಿದರು. ಆರೋಪಿಯು ಈ ಬಗ್ಗೆ ಹೇಳುವಾಗ ಎನ್ ಐಎ ಕಾಯ್ದೆ 2008ರ ಸೆಕ್ಷನ್ 21ನ್ನು ಉದಾಹರಿಸಿದ್ದಾರೆ. ಅರ್ಜಿದಾರ ಆರೋಪಿಯು ಮೊದಲು ವಿಶೇಷ ನ್ಯಾಯಾಧೀಶರಲ್ಲಿ ಮನವಿ ಮಾಡಲಿ, ಆಮೇಲೆ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಬಹುದು ಎಂದೂ ಪ್ರಾಸಿಕ್ಯೂಟರ್ ತಿಳಿಸಿದರು.
ಎರಡೂ ಕಡೆಯ ವಾದ ಆಲಿಸಿದ ಕೋರ್ಟ್, ನವೆಂಬರ್ 11ಕ್ಕೆ ವಿಚಾರಣೆಯನ್ನು ಮುಂದೂಡಿತು. ಯೂಸುಫ್ ರನ್ನು ಬಂಧಿಸುವಾಗ ಅವರಿಗೆ ಎಫ್ ಐಆರ್ ಇಲ್ಲವೇ ರಿಮಾಂಡ್ ಮಾಹಿತಿ ಯಾವುದನ್ನೂ ನೀಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದರು. ಬಂಧಿತ ಯೂಸುಫ್ ರನ್ನು ಇತರ ಬಂಧಿತರೊಂದಿಗೆ ಟ್ರಯಲ್ ಕೋರ್ಟಿನಲ್ಲಿ ನಿಲ್ಲಿಸಿದಾಗ, ಎಫ್ ಐಆರ್ ಪ್ರತಿ ನೀಡುವಂತೆ ಕೇಳಿದಾಗ ಎನ್ ಐಎ ಕೊಡಲು ನಿರಾಕರಿಸಿತು ಎಂದು ತಿಳಿಸಲಾಯಿತು.
ಎಫ್ ಐಆರ್ ತುಂಬ ಸೂಕ್ಷ್ಮವಾದುದಾಗಿದ್ದು ತನಿಖೆಯ ಹಂತದಲ್ಲೇ ನೀಡುವುದು ತನಿಖೆಯ ದಾರಿ ತಪ್ಪಿಸಲು ಸಹಾಯಕವಾದೀತು ಎಂದು ಪ್ರಾಸಿಕ್ಯೂಟರ್ ಪರ ವಾದಿಸಿದರು.
ಸೆಪ್ಟೆಂಬರ್ 22ರಂದು ಜಾರಿ ನಿರ್ದೇಶನಾಲಯದವರ ಸಹಿತ ಎನ್ ಐಎಯವರು ದೇಶದೆಲ್ಲೆಡೆ ಪಿಎಫ್ ಐ ಕಚೇರಿಗಳ ಮೇಲೆ ದಾಳಿ ನಡೆಸಿ ಕಾರ್ಯಕರ್ತರನ್ನು ಬಂಧಿಸಿದ್ದರು. ಸೆಪ್ಟೆಂಬರ್ 28ರಂದು ಗೆಜೆಟ್ ಪ್ರಕಟಣೆ ಹೊರಡಿಸಿದ ಕೇಂದ್ರ ಗೃಹ ಮಂತ್ರಾಲಯವು ಪಿಎಫ್ ಐ, ಅದರ ಸಹ ಸಂಸ್ಥೆಗಳಾದ ಆರ್ ಎಫ್- ರಿಹಬ್ ಇಂಡಿಯಾ ಫೌಂಡೇಶನ್, ಸಿಎಫ್ಐ- ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಎಐಐಸಿ- ಅಖಿಲ ಭಾರತ ಇಮಾಮ್ಸ್ ಕೌನ್ಸಿಲ್, ಎನ್ ಸಿಎಚ್ ಆರ್ ಓ- ಮಾನವ ಹಕ್ಕುಗಳ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ, ರಾಷ್ಟ್ರೀಯ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೆಡರೇಶನ್, ಕೇರಳದ ರಿಹಾಬ್ ಫೌಂಡೇಶನ್ ಗಳನ್ನು ಕಾನೂನು ಬಾಹಿರ ಸಂಸ್ಥೆಗಳು ಎಂದು ಘೋಷಿಸಿತ್ತು.