ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ತಂಡಕ್ಕೆ ಸೋಲುಣಿಸಿ ಅರ್ಜೆಂಟೀನಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದು ಕೂಡ 16ನೇ ಬಾರಿ ಎಂಬುದು ವಿಶೇಷವಾಗಿದೆ.
ಫ್ಲೋರಿಡಾದ ಮಿಯಾಮಿ ಗಾರ್ಡನ್ಸ್ ನಲ್ಲಿರುವ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ಕಂಡು ಬಂದಿತ್ತು. ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯ ಮೊದಲಾರ್ಧದಲ್ಲಿ ರಣರೋಚಕ ಪೈಪೋಟಿ ಕಂಡು ಬಂದರೂ ಉಭಯ ತಂಡಗಳ ಆಟಗಾರರು ಗೋಲುಗಳಿಸುವಲ್ಲಿ ವಿಫಲರಾದರು. ಆದರೆ 112ನೇ ನಿಮಿಷದಲ್ಲಿ ಡಿ ಮರಿಯಾ ನೀಡಿದ ಅತ್ಯುತ್ತಮ ಪಾಸ್ ಅನ್ನು ಲೌಟಾರೊ ಮಾರ್ಟಿನೆಝ್ ಯಶಸ್ವಿಯಾದರು. ಈ ಗೋಲಿನೊಂದಿಗೆ ಅರ್ಜೆಂಟೀನಾ ತಂಡವು ಗೆಲುವನ್ನು ಖಚಿತಪಡಿಸಿಕೊಂಡಿತು.
ಅಂತಿಮ ಮೂರು ನಿಮಿಷಗಳಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡುವ ಮೂಲಕ ಫೈನಲ್ ಪಂದ್ಯವನ್ನು 1-0 ಅಂತರದಿಂದ ಗೆದ್ದುಕೊಂಡರು. ಈ ಗೆಲುವಿನೊಂದಿಗೆ ಅತೀ ಹೆಚ್ಚು ಬಾರಿ ಕೋಪಾ ಅಮೆರಿಕ ಟ್ರೋಫಿ ಗೆದ್ದ ದಾಖಲೆಯನ್ನು ಅರ್ಜೆಂಟೀನಾ ತನ್ನದಾಗಿಸಿಕೊಂಡಿದೆ.
ALTA EN EL CIELO 🏆 pic.twitter.com/vjZaBc1ssB
— CONMEBOL Copa América™️ (@CopaAmerica) July 15, 2024