ಪತ್ನಿಯನ್ನು ಕೊಂದು ಸುಟ್ಟು ಹಾಕಿದ್ದ ಪೊಲೀಸ್ ಅಧಿಕಾರಿ ಬಂಧನ!

Prasthutha: July 26, 2021

ಅಹಮದಾಬಾದ್: ಪತ್ನಿಯನ್ನು ಕೊಂದು ಶವವನ್ನು ಸುಟ್ಟು ಹಾಕಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.

ಸಬ್ ಇನ್ಸ್ ಪೆಕ್ಟರ್ ಪತ್ನಿ ಕಳೆದ ಒಂದೂವರೆ ತಿಂಗಳ ಹಿಂದೆ ಗುಜರಾತ್ ನ ವಡೋದರಾ ಜಿಲ್ಲೆಯ ಕರ್ಜಾನಾ ಪ್ರದೇಶದಿಂದ ನಾಪತ್ತೆಯಾಗಿದ್ದರು. ಆದರೆ ಆಕೆಯನ್ನು ಪತಿಯೇ ತನ್ನ ಸಹಚರರ ಜತೆಗೂಡಿ ಹತ್ಯೆಗೈದು ಶವವನ್ನು ಸುಟ್ಟುಹಾಕಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಕ್ರೈಮ್ ಬ್ರಾಂಚ್ ಪೊಲೀಸರು ತಿಳಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ನೆರವು ನೀಡಿದ್ದ ಕ್ರಿಸ್ಟಿನಾ ಜಡೇಜಾ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ 2020ರಲ್ಲಿ ಕರ್ಜಾನಾ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವುದಾಗಿ ವರದಿ ತಿಳಿಸಿದೆ.

ನೆರೆಯ ಭರೂಚ್ ಜಿಲ್ಲೆಯ ಅಟಾಲಿ ಗ್ರಾಮದ ದಾಹೇಜ್ ಹೈವೇ ಸಮೀಪ ಜಡೇಜಾ ಒಡೆತನದ ನಿರ್ಮಾಣ ಹಂತದಲ್ಲಿರುವ ಹೊಟೇಲ್ ಕಟ್ಟಡದಲ್ಲಿ ಸ್ವೀಟಿ ಪಟೇಲ್ ಅವರನ್ನು ಅವರ ಪತಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಜಯ್ ದೇಸಾಯಿ ಹತ್ಯೆಗೈದು ಸುಟ್ಟುಹಾಕಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಸಾಯಿ ಮತ್ತು ಜಡೇಜಾ ವಿರುದ್ಧ ಕೊಲೆ ಪ್ರಕರಣದಡಿ FIR ದಾಖಲಿಸಲಾಗಿದೆ ಎಂದು ಅಹಮದಾಬಾದ್ ಕ್ರೈಮ್ ಬ್ರಾಂಚ್ ಇನ್ಸ್ ಪೆಕ್ಟರ್ ಡಿಬಿ ಬರಾದ್ ತಿಳಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!