Home ಟಾಪ್ ಸುದ್ದಿಗಳು ವಾಯು ಮಾಲಿನ್ಯಕ್ಕೆ ಕಾರಣವಾದ ಅಡುಗೆ ಅನಿಲ ಬೆಲೆ ಏರಿಕೆ: ಸೌದೆ ಒಲೆ ಅಡುಗೆಗೆ ಮೊರೆ ಹೋದ...

ವಾಯು ಮಾಲಿನ್ಯಕ್ಕೆ ಕಾರಣವಾದ ಅಡುಗೆ ಅನಿಲ ಬೆಲೆ ಏರಿಕೆ: ಸೌದೆ ಒಲೆ ಅಡುಗೆಗೆ ಮೊರೆ ಹೋದ ಜನರು

ದೆಹಲಿ: ಒಕ್ಕೂಟ ಸರಕಾರವು ಮನಬಂದಂತೆ ಅಡುಗೆ ಅನಿಲದ ಬೆಲೆ ಏರಿಸಿರುವುದರಿಂದ ಜನರು ಮತ್ತೆ ಬೆರಣಿ, ಕಟ್ಟಿಗೆ ಹಾಗೂ ಪುರಲೆ ಬಳಸುವ ಹಂತ ತಲುಪಿದ್ದು ವಾಯು ಮಾಲಿನ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.


ಕಳೆದೊಂದು ವರ್ಷದಿಂದ ಭಾರತೀಯ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಬೇಕಾಬಿಟ್ಟಿ ಏರಿಸಿವೆ. ಹೆಚ್ಚು ಕಡಿಮೆ ಸಾಮಾನ್ಯ ಅಡುಗೆ ಅನಿಲ ಸಿಲಿಂಡರ್ ನ ಬೆಲೆಯು ದುಪ್ಪಟ್ಟು ಆಗಿದೆ.


ಸಿಲಿಂಡರಿಗೆ ರೂ. 600ರೊಳಗೆ ಇದ್ದ ದರವು ಒಂದು ವರ್ಷದೊಳಗೆ ಸಿಲಿಂಡರಿಗೆ ರೂ. 900ನ್ನು ದಾಟಿ ಸಾವಿರದೊತ್ತಿಗೆ ಬಂದಿದೆ. ಇದರ ಜೊತೆಗೆ ಅಡುಗೆ ಅನಿಲಕ್ಕೆ ಸಿಗುತ್ತಿದ್ದ ಸಬ್ಸಿಡಿ ಸಹ 2020ರ ಮೇಯಿಂದ ನಿಲ್ಲಿಸಲಾಗಿದೆ. ಆದ್ದರಿಂದ ಮಧ್ಯಮ ವರ್ಗದವರು ಮತ್ತೆ ಕಟ್ಟಿಗೆ, ಪುರಲೆ, ಬೆರಣಿ ಎಂದು ಬದಲಿ ಉರುವಲು ಬಳಕೆ ಮರು ಆರಂಭಿಸಿದ್ದಾರೆ. ವಾಯು ಮಾಲಿನ್ಯಕ್ಕೆ ಇದೂ ದಾರಿ ಎಂದು ತಜ್ಞರು ತಿಳಿಸಿದ್ದಾರೆ.

Join Whatsapp
Exit mobile version