Home ಟಾಪ್ ಸುದ್ದಿಗಳು ‘ಮೂರು ಮಕ್ಕಳನ್ನು ಹೊಂದಿರುವವರನ್ನು ಜೈಲಿಗೆ ತಳ್ಳಬೇಕು’ : ಪ್ರಚಾರ ಪ್ರಿಯ ನಟಿ ಕಂಗನಾ ರಾಣಾವತ್ ವಿವಾದಾತ್ಮಕ...

‘ಮೂರು ಮಕ್ಕಳನ್ನು ಹೊಂದಿರುವವರನ್ನು ಜೈಲಿಗೆ ತಳ್ಳಬೇಕು’ : ಪ್ರಚಾರ ಪ್ರಿಯ ನಟಿ ಕಂಗನಾ ರಾಣಾವತ್ ವಿವಾದಾತ್ಮಕ ಹೇಳಿಕೆ

ಹೊಸದಿಲ್ಲಿ : ಜನಸಂಖ್ಯಾ ನಿಯಂತ್ರಣಕ್ಕೆ ದೇಶದಲ್ಲಿ ಕಟ್ಟುನಿಟ್ಟಿನ ಕಾನೂನು ತರಬೇಕು. ಮೂವರು ಮಕ್ಕಳನ್ನು ಹೊಂದಿರುವವರನ್ನು ಜೈಲಿಗೆ ತಳ್ಳಬೇಕೆಂದು ನಟಿ ಕಂಗನಾ ರಾಣಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

ಅಧಿಕ ಜನಸಂಖ್ಯೆಯಿಂದಾಗಿ ದೇಶದಲ್ಲಿ ಕೋವಿಡ್ ಪ್ರಕರಣಗಳು ತೀವ್ರಗೊಂಡಿದೆ ಎಂದು ನಟಿ ಕಂಗನಾ ರಾಣಾವತ್ ಟ್ವೀಟ್ ಮಾಡಿದ್ದಾರೆ. ‘ಜನಸಂಖ್ಯಾ ನಿಯಂತ್ರಣಕ್ಕೆ ದೇಶದಲ್ಲಿ ಕಠಿಣ ಕಾನೂನುಗಳು ಬೇಕು. ವೋಟ್ ಬ್ಯಾಂಕ್ ಗಿಂತ ಇದು ಮುಖ್ಯವಾಗಿದೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಮೊದಲು ಪ್ರಯತ್ನಿಸಿದವರು ಇಂದಿರಾ ಗಾಂಧಿ. ಅವರು ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತನಾಡಿದ ಕಾರಣ ನಂತರದ ಚುನಾವಣೆಯಲ್ಲಿ ಸೋಲಬೇಕಾಯಿತು. ನಂತರ ಅವರನ್ನು ಹತ್ಯೆ ಮಾಡಲಾಯಿತು.

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸುವಾಗ, ಮೂರು ಮಕ್ಕಳನ್ನು ಹೊಂದಿರುವವರನ್ನು ಜೈಲಿಗೆ ತಳ್ಳುವ ಅಥವಾ ಅವರಿಗೆ ದಂಡ ವಿಧಿಸುವ ಕಾನೂನಿನ ಅಗತ್ಯವಿದೆ” ಎಂದು ಕಂಗನಾ ತನ್ನ ಟ್ವೀಟ್ ನಲ್ಲಿ ಹೇಳಿದ್ದಾರೆ.

ಕಂಗನಾ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಮೂರು ಮಕ್ಕಳನ್ನು ಪಡೆದ ಕಂಗನಾ ಅವರ ಪೋಷಕರಿಗೆ ಇದು ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version