Home ಟಾಪ್ ಸುದ್ದಿಗಳು ಕೆಲಸದಿಂದ ವಜಾ: ಗ್ರಾಪಂ ಕಚೇರಿ ಬಾಗಿಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆ ನೌಕರ

ಕೆಲಸದಿಂದ ವಜಾ: ಗ್ರಾಪಂ ಕಚೇರಿ ಬಾಗಿಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆ ನೌಕರ

ಬೆಂಗಳೂರು: ಕಸ ಗುಡಿಸುವ (ಸ್ವೀಪರ್) ಕೆಲಸದಿಂದ ವಜಾಗೊಳಿಸಿದ್ದರಿಂದ ನೊಂದ ಗುತ್ತಿಗೆ ನೌಕರರೊಬ್ಬರು ಗ್ರಾಮ ಪಂಚಾಯಿತಿ ಕಚೇರಿಯ ಬಾಗಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಾದನಾಯಕನಹಳ್ಳಿ ಬಳಿ ನಡೆದಿದೆ.

ಹೆಗ್ಗಡದೇವಪುರದ ಹನುಮಯ್ಯ(50) ಆತ್ಮಹತ್ಯೆ ಮಾಡಿಕೊಂಡವರು.

ಕಳೆದ ನಾಲ್ಕು ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ನೊಂದ ಹನುಮಯ್ಯ ಆಲೂರು ಗ್ರಾಮ ಪಂಚಾಯಿತಿ ಕಚೇರಿ ಬಾಗಿಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp
Exit mobile version