Home ಟಾಪ್ ಸುದ್ದಿಗಳು ಒತ್ತುವರಿ ಭೂಮಿಗೆ ಸೂಕ್ತ ದರ ನಿಗದಿಪಡಿಸಿ ಗುತ್ತಿಗೆ: ಸಚಿವ ಅಶೋಕ್

ಒತ್ತುವರಿ ಭೂಮಿಗೆ ಸೂಕ್ತ ದರ ನಿಗದಿಪಡಿಸಿ ಗುತ್ತಿಗೆ: ಸಚಿವ ಅಶೋಕ್

ಮಡಿಕೇರಿ: ಒತ್ತುವರಿ ಭೂಮಿಗೆ ಸೂಕ್ತ ದರ ನಿಗದಿಪಡಿಸಿ ಗುತ್ತಿಗೆ ನೀಡಲಾಗುವುದು  ಎಂದು ಕಂದಾಯ ಸಚಿವ ಆರ್ . ಅಶೋಕ್ ಹೇಳಿದ್ದಾರೆ

ಮಡಿಕೇರಿಯ ರೈತ ಸಮಾವೇಶದಲ್ಲಿ  ಮತನಾಡಿದ ಅವರು, ವಿವಿಧ ಮಾನದಂಡಗಳ ಮೇಲೆ ಭೂಮಿಗೆ ದರ ನಿಗದಿಪಡಿಸಲಾಗುವುದು. ಬಡವರಿಗೆ ಸೈಟ್ ನೀಡುವಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಅಂತಹ ಅವಶ್ಯವಿರುವ ಸ್ಥಳಗಳನ್ನು ಗುತ್ತಿಗೆ ನೀಡಲಾಗುವುದಿಲ್ಲ ಎಂದು ಹೇಳಿದರು.

ತುರ್ತಾಗಿ ಜಾಗ ಬೇಕಾದಲ್ಲಿ ಗುತ್ತಿಗೆ ನೀಡಿದ ಭೂಮಿಯನ್ನು ಹಿಂಪಡೆಯಲಾಗುತ್ತದೆ.  ಫಾರಂ 57ರಲ್ಲಿ ಅರ್ಜಿ ಸಲ್ಲಿಸಲು ಇನ್ನೊಂದು ವರ್ಷ ಕಾಲಾವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಕಂದಾಯ ಇಲಾಖೆಯ ಕಂಟ್ರೋಲ್ ರೂಂ ತೆರೆಯಲಾಗುತ್ತದೆ.  ಕಂಟ್ರೋಲ್ ರೂಂಗೆ ಕರೆಮಾಡಿ ಆಧಾರ್ ಸಂಖ್ಯೆ, ಮೊಬೈಲ್ ನಂ ಹೇಳಿದರೆ ತಕ್ಷಣ ಕ್ರಮಕ್ಕೆ ಸೂಚನೆ ನೀಡಲಾಗುತ್ತದೆ. ಮೊಬೈಲ್ ಮೂಲಕವೇ ಸಮಸ್ಯೆಯನ್ನು ತಿಳಿದು ಕ್ರಮ ತೆಗೆದುಕೊಳ್ಳಲಾಗುತ್ತದೆ. ಪೆನ್ಷನ್ ವಿಚಾರದಲ್ಲಾಗುವ ಸಮಸ್ಯೆ ಬಗೆಹರಿಸಲು  ,ಕೂಡಾ ಕಂಟ್ರೋಲ್ ರೂಂ ತೆರೆಯಲಾಗುವುದು ಎಂದು ಹೇಳಿದರು.

Join Whatsapp
Exit mobile version