ಮುಂದುವರಿದ NIA ದಾಳಿ; ಇಬ್ಬರು PFI ಕಾರ್ಯಕರ್ತರು ವಶಕ್ಕೆ

ಕಲಬುರಗಿ: ದೇಶಾದ್ಯಂತ ಸೆ.22ರಂದು ಪಿಎಫ್ ಐ ಕಚೇರಿ, ನಾಯಕರ ಮನೆ ಮೇಲೆ ಎನ್ ಐಎ ದಾಳಿ ನಡೆಸಿದ ಬೆನ್ನಲ್ಲೇ ಮಂಗಳವಾರ ಬೆಳಗ್ಗಿನ ಜಾವ ಪಿಎಫ್ ಐ ಸಂಘಟನೆಯ ಇತರ ಕೆಲ ಕಾರ್ಯಕರ್ತರ ಮೇಲೆ ಪೊಲೀಸರು ಮತ್ತೆ ದಾಳಿ ನಡೆಸಿದ್ದು, ಕಲಬುರಗಿಯಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.   

ನಗರದ ಇಕ್ಬಾಲ್ ಕಾಲನಿ ಸೇರಿ ನಾಲ್ಕು ಕಡೆ ದಾಳಿ ನಡೆಸಿರುವ ಪೊಲೀಸರು ಮಜಾರ್ ಹುಸೇನ್, ಮತ್ತು ಇಸಾಮುದ್ದೀನ್ ಎಂಬ ಇಬ್ಬರು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಹಲವರಿಗಾಗಿ ಶೋಧಾಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.