Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ಮುಂದುವರೆದ ಜೆಸಿಬಿ ಕಾರ್ಯಾಚರಣೆ: 7 ಮನೆಗಳು ನೆಲಸಮ

ಬೆಂಗಳೂರಿನಲ್ಲಿ ಮುಂದುವರೆದ ಜೆಸಿಬಿ ಕಾರ್ಯಾಚರಣೆ: 7 ಮನೆಗಳು ನೆಲಸಮ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಏಳು ಮನೆಗಳು ಸೇರಿದಂತೆ ಹಲವು ತಡೆಗೋಡೆಗಳನ್ನು ನೆಲಸಮ ಮಾಡಲಾಗಿದೆ.

ಮಂಗಳವಾರ ಸಂಜೆವರೆಗೂ ಮಹದೇವಪುರ ವಿಭಾಗದ ಶೀಲವಂತನಕೆರೆ ಹಾಗೂ ಕೆ.ಆರ್.ಪುರ ವಿಭಾಗದ ಎಸ್.ಆರ್ ಲೇಔಟ್ ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಪ್ರಮುಖವಾಗಿ ಮಹದೇವಪುರ ವಿಭಾಗದ ಶೀಲವಂತನ ಕೆರೆಯ ಅಸೆಂಟ್ ಗಾರ್ಡೇನಿಯ ಹಿಂಭಾಗ ಸುಮಾರು 130 ಮೀಟರ್ ಉದ್ದದ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ.

ಅದೇ ರೀತಿ, ಕೆ.ಆರ್.ಪುರ ವಿಭಾಗ ಬಸವನಪುರ ವಾರ್ಡ್ ಎಸ್.ಆರ್ ಲೇಔಟ್ ನಲ್ಲಿ ಕೂಡಾ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, 80 ಮೀಟರ್ ಉದ್ದದ ಮಳೆ ನೀರುಗಾಲುವೆಯ ಸ್ಥಳದಲ್ಲಿ, ಮಳೆ ನೀರುಗಾಲುವೆಗೆ ಹೊಂದಿಕೊಂಡಂತೆ 6 ಆರ್ ಸಿಸಿ ಮನೆ ಹಾಗೂ 1 ಶೀಟಿನ ಮನೆಗಳಿವೆ. ಈ ಪೈಕಿ 2 ಮನೆಯ ಕಾಂಪೌಂಡ್ ಗೋಡೆ ಹಾಗೂ ಮೆಟ್ಟಿಲುಗಳ ಭಾಗವನ್ನು ತೆರವುಗೊಳಿದಲಾಗಿದೆ.

ಬಳಿಕ 2 ಅಂತಸ್ತಿನ ಕಟ್ಟಡವನ್ನು ಮಳೆ ನೀರುಗಾಲುವೆಯ ಮೆಲೆ ನಿರ್ಮಾಣ ಮಾಡಿದ್ದು, ಮಾರ್ಕಿಂಗ್ ಮಾಡಿರುವ ಭಾಗದವರೆಗೆ ಗೋಡೆ ತೆರವು ಮಾಡಲು ಮುಂದಾದಾಗ ಮನೆಯ ಮಾಲಿಕರೇ ಸ್ವತಹ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ.

ಮುಂದುವರಿದು, 1 ಮನೆಯ ಗೋಡೆ ಭಾಗ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ. ನಂತರ 1 ಶೆಡ್ ನ ಗೋಡೆ ಭಾಗವನ್ನು ತೆರವುಗೊಳಿಸಲಾಗಿದೆ. ಆ ಬಳಿಕ ಮಳೆ ನೀರುಗಾಲುವೆ ಮೇಲೆ ನಿರ್ಮಿಸಿದ್ದ 1 ಮನೆಯ ಗೋಡೆ ಭಾಗ ತೆರವುಗೊಳಿಸಿದ್ದು, ಮತ್ತೊಂದು ಮನೆಯ ಗೋಡೆ ಭಾಗ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version