Home ಟಾಪ್ ಸುದ್ದಿಗಳು ಗ್ರಾಹಕರೇ ಗಮನಿಸಿ…। ಮಾರ್ಚ್ 27 ರಿಂದ ಎಪ್ರಿಲ್ 4 ರ ವರೆಗೆ ಸತತ ಬ್ಯಾಂಕ್ ರಜೆಗಳು

ಗ್ರಾಹಕರೇ ಗಮನಿಸಿ…। ಮಾರ್ಚ್ 27 ರಿಂದ ಎಪ್ರಿಲ್ 4 ರ ವರೆಗೆ ಸತತ ಬ್ಯಾಂಕ್ ರಜೆಗಳು

ಸಾರ್ವಜನಿಕ ಹಾಗೂ ಖಾಸಗಿ ವಲಯದ ಎಲ್ಲಾ ಬ್ಯಾಂಕ್‌ಗಳು ಮಾರ್ಚ್ 27ರಿಂದ ಏಪ್ರಿಲ್ 4ರ ನಡುವೆ ಬರೋಬ್ಬರಿ ಏಳು ದಿನ ಮುಚ್ಚಿರಲಿದೆ. ಹೀಗಾಗಿ ಬ್ಯಾಂಕ್ ಸಂಬಂಧಿತ ಏನೇ ಕೆಲಸವಿದ್ದರೂ ಈ ದಿನಾಂಕಗಳ ಮುಂಚಿತವಾಗಿ ಮಾಡಿ ಮುಗಿಸುವುದು ಒಳಿತು. ಮಾರ್ಚ್ 27 ರಿಂದ ಮಾರ್ಚ್ 29ರವರೆಗೆ ಬ್ಯಾಂಕ್ ಸತತ ಮೂರು ದಿನ ಬಂದ್ ಇರಲಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವೆಬ್‌ಸೈಟ್‌ನಲ್ಲಿನ ಬ್ಯಾಂಕ್ ರಜಾ ವಿವರಗಳ ಪ್ರಕಾರ, ಬ್ಯಾಂಕುಗಳಿಗೆ ಹೋಳಿ ಹಬ್ಬದ ಕಾರಣ ಮಾರ್ಚ್ 29 ರಂದು ರಜೆ ಇದೆ. ಮಾರ್ಚ್ 30 ರಂದು ಪಾಟ್ನಾದಲ್ಲಿ ಮಾತ್ರ ಬ್ಯಾಂಕುಗಳನ್ನು ಮುಚ್ಚಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಇದರ ನಡುವಿನ ಅವಧಿಯಲ್ಲಿ, ಅಂದರೆ ಮಾರ್ಚ್ 30 ಮತ್ತು ಏಪ್ರಿಲ್ 3 ರಂದು  ಮಾತ್ರ  ಕೇವಲ ಎರಡು ದಿನಗಳವರೆಗೆ ಬ್ಯಾಂಕುಗಳು  ತೆರೆಯುತ್ತವೆ.

ಮಾರ್ಚ್ 31 ರಂದು, ಹಣಕಾಸು ವರ್ಷದ ಮುಕ್ತಾಯದ ಕೊನೆಯ ದಿನದ ಕಾರಣ ಬ್ಯಾಂಕ್ ನಲ್ಲಿ ಸಾರ್ವಜನಿಕ ಸೇವೆಗಳಿಗೆ ಅವಕಾಶವಿರುವುದಿಲ್ಲ. ಇದಲ್ಲದೆ ಹಣಕಾಸು ವರ್ಷದ ಅಂತ್ಯದ ಹಿನ್ನಲೆಯಲ್ಲಿ ಏಪ್ರಿಲ್ 1ರಂದು ಬ್ಯಾಂಕುಗಳಿಗೆ ರಜೆ ಇರಲಿದೆ . ಏಪ್ರಿಲ್ 2 ರಂದು, ಗುಡ್ ಪ್ರೈಡೇಯ ಪ್ರಯುಕ್ತ ಸರ್ಕಾರಿ ರಜೆ ಇದೆ. ಏಪ್ರಿಲ್ 4 ಭಾನುವಾರವಾಗಿದೆ.

ಎಲ್ಲಾ ಬ್ಯಾಂಕ್ ರಜಾದಿನಗಳಲ್ಲಿ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ತೆರೆದಿರುತ್ತವೆ ಎಂದು ಆರ್ ಬಿ ಐ ತಿಳಿಸಿದೆ.

Join Whatsapp
Exit mobile version