ಗೋಸ್ವಾಮಿ ಜಾಮೀನು ತೀರ್ಪು ಸಂಬಂಧಿ ಕಾರ್ಟೂನ್ | ವ್ಯಂಗ್ಯ ಚಿತ್ರಗಾರ್ತಿ ರಚಿತಾ ತನೇಜಾ ವಿರುದ್ಧ ನ್ಯಾಯಾಂಗ ನಿಂದನೆ ದಾವೆಗೆ ಅನುಮತಿ

Prasthutha|

ನವದೆಹಲಿ : ಸುಪ್ರೀಂ ಕೋರ್ಟ್ ತೀರ್ಪೊಂದರ ಕುರಿತಂತೆ ಕಾರ್ಟೂನ್ ರಚಿಸಿದ್ದ ಖ್ಯಾತ ವ್ಯಂಗ್ಯಚಿತ್ರಗಾರ್ತಿ ರಚಿತಾ ತನೇಜಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸಮ್ಮತಿಸಿದ್ದಾರೆ.

ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ಬಂಧಿತನಾಗಿದ್ದ ಬಿಜೆಪಿ ಬೆಂಬಲಿಗ ಪತ್ರಕರ್ತ, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದುದನ್ನು ವಿಶ್ಲೇಷಿಸುವ ನಿಟ್ಟಿನಲ್ಲಿ ರಚಿತಾ ತನೇಜಾ ಅವರು ಕಾರ್ಟೂನ್ ಗಳನ್ನು ಟ್ವೀಟ್ ಮಾಡಿದ್ದರು.

- Advertisement -

ಇತ್ತೀಚೆಗೆ ಸ್ಟಾಂಡ್ ಅಪ್ ಕಾಮಿಡಿ ಕಲಾವಿದ ಕುನಾಲ್ ಕಮ್ರಾ ವಿರುದ್ಧವೂ ಇದೇ ವಿಷಯಕ್ಕೆ ಸಂಬಂಧಿಸಿ ನ್ಯಾಯಾಂಗ ನಿಂದನೆ ದಾವೆ ಹೂಡಲು ಅನುಮತಿ ನೀಡಲಾಗಿತ್ತು.   

- Advertisement -