Home ಟಾಪ್ ಸುದ್ದಿಗಳು ಭಾರತ ಮೂಲದ ಕಂಪನಿಯ ಕಲುಷಿತ ಕೆಮ್ಮು ನಿವಾರಕ ಸಿರಪ್‌ ಸೇವನೆ; ಗಾಂಬಿಯಾದಲ್ಲಿ ಸಾವಿನ ಸಂಖ್ಯೆ 70ಕ್ಕೆ...

ಭಾರತ ಮೂಲದ ಕಂಪನಿಯ ಕಲುಷಿತ ಕೆಮ್ಮು ನಿವಾರಕ ಸಿರಪ್‌ ಸೇವನೆ; ಗಾಂಬಿಯಾದಲ್ಲಿ ಸಾವಿನ ಸಂಖ್ಯೆ 70ಕ್ಕೆ ಏರಿಕೆ

ಬಂಜುಲ್‌: ಭಾರತದ ಕಂಪನಿಯೊಂದು ತಯಾರಿಸಿರುವ ನಾಲ್ಕು ಕಲುಷಿತ ಕೆಮ್ಮು ನಿವಾರಕ ಸಿರಪ್‌ ಸೇವನೆಯಿಂದ ಉಲ್ಬಣಿಸಿದ ಮೂತ್ರಪಿಂಡ ಸಮಸ್ಯೆಯಿಂದಾಗಿ ಮೃತಪಟ್ಟ ಮಕ್ಕಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ ಎಂದು ಪಶ್ಚಿಮ ಆಫ್ರಿಕಾದ ರಾಷ್ಟ್ರವಾಗಿರುವ ಗಾಂಬಿಯಾದ ಅಧ್ಯಕ್ಷ ಅದಮ ಬ್ಯಾರೋ, ಸಚಿವ ಸಂಪುಟದ ತುರ್ತು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.


ಭಾರತದ ಔಷಧ ತಯಾರಿಕಾ ಕಂಪೆನಿಯ ಕೆಮ್ಮು ಮತ್ತು ಶೀತ ಸಿರಪ್‌ ಸೇವನೆಯಿಂದ 65ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅ.12 ರಂದು ಹೇಳಿತ್ತು.


ಈ ಸಿರಪ್‌ ಅನ್ನು ದೆಹಲಿ ಮೂಲದ ಮೈಡನ್ ಫಾರ್ಮಾಸ್ಯುಟಿಕಲ್ಸ್‌ ಲಿಮಿಟೆಡ್‌ ತಯಾರಿಸಿದೆ. ಈ ಬಗ್ಗೆ ಆರೋಗ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಉತ್ತರ ಭಾರತದಲ್ಲಿ ಕಂಪೆನಿಯ ಒಂದು ಕೇಂದ್ರವನ್ನು ಮುಚ್ಚಲಾಗಿದೆ.


ಸಿರಪ್‌ಗಳನ್ನು ಹಿಂಪಡೆಯಲು ಗಾಂಬಿಯಾದಲ್ಲಿ ಅಭಿಯಾನ ಪ್ರಾರಂಭವಾಗಿದ್ದು, ಆರೋಗ್ಯ ಸಚಿವಾಲಯವು ಅಲ್ಲಿನ ರೆಡ್‌ ಕ್ರಾಸ್‌ ಸೊಸೈಟಿಯ ಸಹಯೋಗದಲ್ಲಿ ನೂರಾರು ಯುವಕರ ತಂಡಗಳನ್ನು ರಚಿಸಿ, ಮನೆ ಮನೆಗೆ ತೆರಳಿ, ಕೆಮ್ಮಿನ ಸಿರಪ್‌ನ ಸೀಸೆಗಳನ್ನು ಸಂಗ್ರಹಿಸುತ್ತಿದೆ.

Join Whatsapp
Exit mobile version